ಬೆಂಗಳೂರು : ಅಕ್ಷರ ದೀಪ ಪೌಂಡೇಶನ್, ಅಕ್ಷರ ದೀಪ ಪ್ರಕಾಶನ ಗದಗ ಇವರು ಬಹುಮುಖ ಸೇವೆಯನ್ನು ಗುರುತಿಸಿ ಕೊಡಮಾಡುವ ‘ಕುಮಾರವ್ಯಾಸ ರಾಷ್ಟ್ರೀಯ ಪ್ರಶಸ್ತಿ’ಗೆ ಡಾ. ಎ. ಡಿ. ಕೊಟ್ನಾಳ ಆಯ್ಕೆಯಾಗಿದ್ದಾರೆ. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡಿರುವ ಜೊತೆಗೆ ಸಮಾಜ ಸೇವೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿನ ಇವರ ಸೇವಾ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಸಾಹಿತ್ಯಾಸಕ್ತದಾಗಿರುವ ಇವರು ಕೃಷಿ ಕ್ಷೇತ್ರದಲ್ಲೂ ಕಳೆದ 35 ವರ್ಷಗಳಿಂದ ರೈತ ಸಮುದಾಯದ ಅಭಿವೃದಿಗೆ ಶ್ರಮಿಸುತ್ತಿದ್ದಾರೆ. ಇವರ ಬಹುಮುಖ ಸೇವೆಗೆ ವಿವಿಧ ಸಂಘ ಸಂಸ್ಥೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅಕ್ಷರ ದೀಪ ಫೌಂಡೇಶನ್, ಅಕ್ಷರ ದೀಪ ಪ್ರಕಾಶನ, ಗದಗ ಕೊಡಮಾಡುವ “ಕುಮಾರವ್ಯಾನ ರಾಷ್ಟ್ರೀಯ ಪ್ರಶಸ್ತಿ’ಯು ಇವರ ಅಪ್ರತಿಮ ಸಾಧನೆಗೆ ಸಂದ ಗೌರವವಾಗಿದೆ.
20 ಜುಲೈ 2025 ರ ರವಿವಾರ ದಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಆಯೋಜಿಸಿರುವ ಅಕ್ಷರೋತ್ಸವ ಅದ್ದೂರಿ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
Subscribe to Updates
Get the latest creative news from FooBar about art, design and business.