ಮುಡಿಪು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಸೂರಜ್ ಪಿ.ಯು ಕಾಲೇಜ್ ಮುಡಿಪು ಇವರ ಜಂಟಿ ಆಶ್ರಯದಲ್ಲಿ 107ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ 02 ಜುಲೈ 2025ರಂದು ಸೂರಜ್ ಪಿ.ಯು ಕಾಲೇಜ್ ಮುಡಿಪು ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರಜ್ ಪಿ. ಯು. ಕಾಲೇಜ್ ಮುಡಿಪು ಇದರ ಚೇರ್ಮನ್ ಡಾ. ಮಂಜುನಾಥ್ ಎಸ್. ರೇವಣ್ಕರ್ ವಹಿಸಿದ್ದರು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ಚುಟುಕು ಸಾಹಿತ್ಯ ಪರಿಷತ್ ಇದರ ಗೌರವ ಅಧ್ಯಕ್ಷರಾದ ಇರಾ ನೇಮು ಪೂಜಾರಿ, ಹಾಗೂ ನಿವೃತ್ತ ಶಿಕ್ಷಕಿ ಹಾಗೂ ಲೇಖಕಿಯಾದ ಡಾ. ಅರುಣಾನಾಗರಾಜ್ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಆತ್ಮಶಕ್ತಿ ಕೋ ಆಪರೇಟಿವ್ ಬ್ಯಾಂಕ್ ಪಡೀಲ್ ಇದರ ಚೇರ್ಮನ್ ಸಹಕಾರ ರತ್ನ ಚಿತ್ತರಂಜನ್ ಬೋಳೂರ್, ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ವಿಜಯಲಕ್ಷ್ಮೀ ಪ್ರಸಾದ್ ರೈ ಕಲ್ಲಿಮಾರ್, ನಿವೃತ್ತ ಶಿಕ್ಷಕರು ಹಾಗೂ ಲೇಖಕರಾದ ರವೀಂದ್ರ ರೈ ಕಲ್ಲಿಮಾರ್, ಪ್ರಸಾದ್ ರೈ ಕಲ್ಲಿಮಾರ್, ಸೂರಜ್ ಪಿ. ಯು. ಕಾಲೇಜ್ ಮುಡಿಪು ಇದರ ಪ್ರಾಂಶುಪಾಲರಾದ ರಕ್ಷಿತ್ ಕುಲಾಲ್, ಉಮೇಶ್ ರಾವ್ ಕುಂಬ್ಳೆ ಭಾಗವಹಿಸಿದ್ದರು.
ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಎಲ್ಲರನ್ನೂ ಸ್ವಾಗತಿಸಿ, ಸುರೇಖಾ ಯಾಲವಾರ ಕಾರ್ಯಕ್ರಮ ನಿರೂಪಿಸಿದರು.