ತೆಕ್ಕಟ್ಟೆ: ಯಶಸ್ವೀ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳ ವತಿಯಿಂದ ಯಕ್ಷಗಾನ ಕೇಂದ್ರದ ಗುರುಗಳಾದ ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ ಇವರಿಗೆ ಅಭಿನಂದನಾ ಸಮಾರಂಭವು ದಿನಾಂಕ 30 ಜೂನ್ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಗುರು ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ “ಕಲಾವಿದನ ಬದುಕಿನಲ್ಲಿ ಶಿಷ್ಯರಾದವರು ಜನ್ಮ ದಿನವನ್ನು ಹಾರೈಸಿ, ಶ್ಲಾಘಿಸಿದರೆ ಜೀವನ ಸಾರ್ಥಕ. ಈವರೆಗೆ ಸಹಸ್ರ ಸಂಖ್ಯೆಯ ಕಲಾವಿದರನ್ನು ರಂಗಕ್ಕೆ ತರುವ ಪ್ರಯತ್ನ ಮಾಡುತ್ತಿರುವಾಗ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಯಕ್ಷಗಾನ ಕೇಂದ್ರ ಅದ್ದೂರಿಯಾಗಿ ಜನ್ಮ ದಿನವನ್ನು ಆಚರಿಸಿರುವುದಕ್ಕಿಂತ ಸಾರ್ಥಕತೆ ಬೇರೇನೂ ಕಾಣೆನು. ಒಂದೇ ಮನೆಯವರಂತೆ ಒಗ್ಗೂಡಿ ಈ ದಿನವನ್ನು ಹಬ್ಬವಾಗಿಸಿ ಹಾರೈಸಿದುದು ಧನ್ಯತೆಯನ್ನು ತಂದಿದೆ” ಎಂದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಡಾ. ಗಣೇಶ್ ಯು, ಸುಧಾ ಕದ್ರಿಕಟ್ಟು, ಗಣಪತಿ ಭಟ್, ಶಿವರಾಮ್, ಭರತ್ ಚಂದನ್ ಕೋಟೇಶ್ವರ, ರಾಹುಲ್ ಕುಂದರ್ ಕೋಡಿ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ತೆಕ್ಕಟ್ಟೆಯ ಹಯಗ್ರೀವದಲ್ಲಿ ಕೇಂದ್ರದ ಗುರುಗಳಾದ ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ ಇವರಿಗೆ ಅಭಿನಂದನೆ
No Comments1 Min Read
Previous Articleಕ.ಸಾ.ಪ.ದಿಂದ ಸಂತ ಶಿಶುನಾಳ ಶರೀಫರ ಜನ್ಮದಿನದ ಕಾರ್ಯಕ್ರಮ
Next Article ಕಾರ್ಕಳದ ಪೆರ್ವಾಜೆ ಹೈಸ್ಕೂಲಿನಲ್ಲಿ ಯಕ್ಷಗಾನ ಶಿಕ್ಷಣ ಆರಂಭ