ಮೂಲ್ಕಿ: ಕಿನ್ನಿಗೋಳಿಯ ದಿವಂಗತ ಕೊ. ಅ. ಉಡುಪ ಅವರ ಸಂಸ್ಮರಣಾರ್ಥ ಪ್ರತಿ ವರ್ಷ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಗೆ ಈ ಬಾರಿ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಆಯ್ಕೆಯಾಗಿದ್ದಾರೆ. ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ತಿಳಿಸಿದ್ದಾರೆ.
ಪ್ರಶಸ್ತಿಯು ರೂಪಾಯಿ 10 ಸಾವಿರ ನಗದು ಹಾಗೂ ಗೌರವ ಫಲಕ ಹೊಂದಿದೆ. 24 ಜುಲೈ 2025ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅರ್ಥಶಾಸ್ತ್ರದ ಕನ್ನಡೀಕರಣದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರಾಗಿರುವ ಶಿಶಿಲರು ಇದುವರೆಗೆ 165 ಅರ್ಥಶಾಸ್ತ್ರ ಕನ್ನಡ ಕೃತಿ, 10 ಅರ್ಥಶಾಸ್ತೆ ಕೃತಿ ಇಂಗ್ಲೀಷ್‌ನಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ 52 ಸೃಜನಶೀಲ ಕೃತಿ, ತುಳುವಿನಲ್ಲಿ 4 ಕೃತಿ ರಚಿಸಿರುವ ಇವರು ಕನ್ನಡದಲ್ಲಿ 10 ಕಾದಂಬರಿ ಮತ್ತು 10 ಸಣ್ಣ ಕಥಾ ಸಂಕಲನ ರಚಿಸಿದ್ದಾರೆ.
ಇವರ ಆತ್ಮಕಥನ ‘ಬೊಗಸೆ ತುಂಬಾ ಕನಸು’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ್ದು, ನಾಲ್ಕು ಆವೃತ್ತಿಗಳನ್ನು ಕಂಡಿದೆ. ಯುರೋಪ್ ಸುತ್ತಿ ಇವರು ರಚಿಸಿದ ‘ದೇಶ ಯಾವುದಾದರೇನು’ ಕೃತಿ ‘ವಿಶ್ವೇಶ್ವರಯ್ಯ ಪ್ರಶಸ್ತಿ’ ಪಡೆದಿದೆ. ಇವರ ಆಂಗ್ಲ ಅರ್ಥಶಾಸ್ತ್ರ ಕೃತಿಗಳು ಸಾರ್ಕ್ ದೇಶಗಳಲ್ಲಿ ಜನಪ್ರಿಯತೆ ಪಡೆದಿವೆ.
ಕನ್ನಡದಲ್ಲಿ ಒಟ್ಟು 231 ಕೃತಿ ರಚನೆ, ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳ ರಚನೆ. ಮಾತ್ರವಲ್ಲದೆ ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. 7-7-2007ರಂದು ಬೆಳಗ್ಗೆ 7 ಈ ಗಂಟೆ 7 ನಿಮಿಷಕ್ಕೆ 7 ತಜ್ಞರಿಂದ ತನ್ನ 7 ಅರ್ಥಶಾಸ್ತ್ರ ಕೃತಿ ಮತ್ತು 10-10-2010ರಂದು ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ 10 ಸಾಹಿತಿಗಳಿಂದ ತನ್ನ 10 ಸಾಹಿತ್ಯ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ್ದು, ಇವರು ಮಾಡಿದ ಎರಡು ವಿಶ್ವ ಈ ದಾಖಲೆಗಳು.
Subscribe to Updates
Get the latest creative news from FooBar about art, design and business.
Previous Articleಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕಮ್ಮಟ ಮತ್ತು ಪ್ರಶಸ್ತಿ ಪ್ರದಾನ | ಜುಲೈ 06
Next Article ಕೋಲ್ಕತಾದಲ್ಲಿ ‘ಸಮ’ ಸಂಗೀತ ಕಛೇರಿ | ಜುಲೈ 06