ಬೆಂಗಳೂರು : ರಂಗ ಸಂಸ್ಥಾನ ಬೆಂಗಳೂರು ಗಾಯಕರಿಗಾಗಿ ರಾಜ್ಯ ಮಟ್ಟದ ಆನ್ಲೈನ್ ಹಿಂದೂಸ್ತಾನಿ ಸಂಗೀತ ಸ್ಪರ್ಧೆ ಏರ್ಪಡಿಸಿದ್ದು, ಆಸಕ್ತ 16 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು 06 ರಿಂದ 07 ನಿಮಿಷಗಳ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡನ್ನು ವಾದ್ಯಜೊತೆಗೂಡಿ ಅಥವಾ ಬರೀ ಹಾಡುಗಾರಿಕೆಯ ವಿಡಿಯೋ ಮಾಡಿ 9110879907 ಈ ಸಂಖ್ಯೆಗೆ ವಾಟ್ಸ್ಆಪ್ ಮಾಡಬಹುದಾಗಿದೆ. ಸ್ಪರ್ಧೆಯ ಪ್ರವೇಶ ಶುಲ್ಕ ರೂಪಾಯಿ 300 ಆಗಿದ್ದು, 03 ಆಗಸ್ಟ್ 2025 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 9110879907 ಸಂಖ್ಯೆಯನ್ನು ಸಂಪರ್ಕಿಸಬಹುದು.

