18 ಏಪ್ರಿಲ್ 2023, ಮಂಗಳೂರು: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆ ಮತ್ತು ಸದ್ಬೋಧ ಗುರುಕುಲದ ಹಿಂದೂ ಸಂಸ್ಕಾರ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಹಿಂದೂ ಸಂಸ್ಕಾರ ಬೇಸಿಗೆ ಶಿಬಿರ” ಏಪ್ರಿಲ್ 3 ರಿಂದ 19ರವರೆಗೆ “ಶ್ರೀ ಕೃಷ್ಣ ನಿಲಯ”, ಕೋಟೆಕಣಿ 1ನೇ ಕ್ರಾಸ್, ಉರ್ವಸ್ಟೋರ್, ಮಂಗಳೂರಿನಲ್ಲಿ ನಡೆಯುತ್ತಿದೆ.
ಈ ಶಿಬಿರದ ವಿಶೇಷತೆಗಳು 1) ವೇದ ಮಂತ್ರಗಳ ಉಪದೇಶ 2) ಸಂಸ್ಕೃತ ಭಾಷಾ ಪರಿಚಯ 3) ಸುಭಾಷಿತ, ನೀತಿಯ ಕಥೆಗಳು 4) ವಿಷ್ಣುಸಹಸ್ರನಾಮ ಪಠಣಾ ತರಬೇತಿ 5) ಬೌದ್ಧಿಕ, ಒಳಾಂಗಣ ಆಟಗಳು 6) ಧಾರ್ಮಿಕ ಶೈಕ್ಷಣಿಕ ಪ್ರವಾಸ 7) ಭಜನಾ ಸಂಗೀತ ತರಬೇತಿ 8) ಪಂಚಾಂಗ, ರಂಗೋಲಿ ಕಲಿಕೆ 9) ಪುರಾಣದ ಕಥೆಗಳು 10) ರಾಮಾಯಣ, ಭಾಗವತ 11) ಪೂಜೆ ಹೋಮ – ಹಿಂದೂ ಸಂಸ್ಕಾರ 12) ಹಿಂದೂ ಧರ್ಮದ ಶ್ರೇಷ್ಠತೆ ಇತ್ಯಾದಿ ವಿಷಯಗಳಿಗೆ ಒತ್ತು ನೀಡಿ ತರಬೇತಿ ನಡೆಯುತ್ತಿದೆ.
ಈ ಶಿಬಿರದಲ್ಲಿ ಸೈಂಟ್ ಆಲೋಶಿಯಶ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಡಾ. ಶಿಕಾರಿಪುರ ಕೃಷ್ಣಮೂರ್ತಿ, ಕಾರ್ಪೊರೇಷನ್ ಬ್ಯಾಂಕ್ ನ ನಿವೃತ್ತ ಡಿ.ಜಿ.ಎಂ. ಸಂಗೀತ ಕಲಾ ವಿಶಾರದರಾದ ಶ್ರೀ ಕೃಷ್ಣರಾಜ ರಾವ್, ಪ್ರೌಢ ಶಾಲೆಯ ಅಧ್ಯಾಪಕರಾದ, ಶ್ರೀಮತಿ ದಿವ್ಯಾರಾಣಿ ಬಿ.ಕೆ. ಮತ್ತು ಶ್ರೀಮತಿ ವೀಣಾ ಗರ್ದೆ ಇವರು ಸಂಪನ್ಮೂಲ ಗುರುಗಳಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.
ದಿನಾಂಕ 07-04-2023 ಶುಕ್ರವಾರ ಅಪರಾಹ್ನ ಶಿಬಿರದ ಒಂದು ಭಾಗವಾಗಿ “ಲವ ಕುಶ ಕಾಳಗ” ಕಥಾನಕದ ಮಕ್ಕಳ ಯಕ್ಷಗಾನ ತಾಳಮದ್ದಳೆ ಅತ್ಯಂತ ಆಕರ್ಷಕವಾಗಿ ಸಂಪನ್ನಗೊಂಡಿತು ಎಂದು ಕಲಾಕುಂಚ ಕೇರಳ ಗಡಿನಾಡ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮೀ ಕಾರಂತ್‌ರವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರಿನ “ಶ್ರೀ ಕೃಷ್ಣ ನಿಲಯ” ಸಭಾಂಗಣದಲ್ಲಿ ಮಕ್ಕಳು ಸಂಸ್ಕಾರ, ಸಂಸ್ಕೃತಿಯೊಂದಿಗೆ ಅಂತರಾಷ್ಟ್ರೀಯ ಖ್ಯಾತಿಯ ಮಹಿಳಾ ಯಕ್ಷಗಾನ ಕಲಾವಿದೆ ಶ್ರೀಮತಿ ವಿದ್ಯಾ ಕೊಳ್ಯೂರು ಅವರ ನಿರ್ದೇಶನದಲ್ಲಿ ನಡೆದ ಈ ತಾಳಮದ್ದಳೆಯ ಭಾಗವತಿಕೆ ಶ್ರೀಮತಿ ಶಾಲಿನಿ ಹೆಬ್ಬಾರ್, ಚಂಡೆ ವಾದನ ಕುಮಾರ್ ವರುಣ್ ಹೆಬ್ಬಾರ್, ಮದ್ದಳೆಯಲ್ಲಿ ಅಭಿಜಿತ ಬಂಟ್ವಾಳ್ ಅರ್ಧದಾರಿಗಳಾಗಿ ಶತ್ರುಘ್ನ ಪಾತ್ರದಲ್ಲಿ ಸುಮುಖ ಹೆಬ್ಬಾರ್, ಲವನ ಪಾತ್ರದಲ್ಲಿ ದೇವಾಂಶು ಕಾರಂತ್, ವಟುಗಳ ಪಾತ್ರದಲ್ಲಿ ಸಂಕರ್ಷಣ ರಾವ್, ದೇವಿ ಸಾಮತ್ಮಿಕ ನಾವಡ, ಸೀತೆಯ ಪಾತ್ರದಲ್ಲಿ ಆರುಷಿರಾವ್, ಕುಶನ ಪಾತ್ರದಲ್ಲಿ ವೇದಾಂತ ಕಾರಂತ್, ರಾಮನ ಪಾತ್ರದಲ್ಲಿ ಸಾತ್ವಿಕ್ ನಾವಡ, ವಾಲ್ಮೀಕಿ ಪಾತ್ರದಲ್ಲಿ ಸಿಂಧೂರ ದೇವ ಕಾನೆ. ಈ ಬಾಲಕ-ಬಾಲಕಿಯರ ಅತ್ಯುದ್ಭುತ ಯಕ್ಷಕಲಾ ಪ್ರಕಾರಗಳನ್ನು ಅನಾವರಣಗೊಳಿಸಿ ಮುಕ್ತವಾದ ವೇದಿಕೆ ಕಲ್ಪಿಸಿ ವಿಶ್ವವಿಖ್ಯಾತ ಆರಾಧನಾ ಕಲೆಯಾದ ಯಕ್ಷಗಾನವನ್ನು ಗಡಿನಾಡಿನಲ್ಲಿ ವೈಭವೀಕರಿಸುತ್ತಿರುವ ಕಲಾಕುಂಚ ಕೇರಳ ಗಡಿನಾಡ ಶಾಖೆಯ ಅಧ್ಯಕ್ಷರೂ ಸೇರಿದಂತೆ ಎಲ್ಲಾ ಪದಾಧಿಕಾರಿಗಳಿಗೆ, ದಾವಣಗರ ಕಲಾಕುಂಚ: ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಸರ್ವ ಸದಸ್ಯರು, ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.