ಬೆಂಗಳೂರು : ಅಕಾಡೆಮಿ ಆಫ್ ಮ್ಯೂಜಿಕ್ (ರಿ.) ಮತ್ತು ಚೌಡಯ್ಯ ಸ್ಮಾರಕ ಭವನ ಅರ್ಪಿಸುವ ‘ರಂಗ ರಂಗೋಲಿ’ ರಾಜ್ಯ ಮಟ್ಟದ ಕನ್ನಡ ನಾಟಕೋತ್ಸವವನ್ನು ದಿನಾಂಕ 9, 10 ಮತ್ತು 11 ಜುಲೈ 2025ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡದ ಮಹಾನ್ ಸಾಹಿತಿಗಳ ಅತ್ಯಂತ ಪ್ರಸಿದ್ಧ ಕಾದಂಬರಿಗಳು ರಂಗ ರೂಪವಾಗಿ ಅನಾವರಣಗೊಳ್ಳುವ ರಾಜ್ಯ ಮಟ್ಟದ ನಾಟಕೋತ್ಸವ ಇದಾಗಿದೆ.
ದಿನಾಂಕ 9 ಜುಲೈ 2025ರಂದು ಸಂಜೆ 6-30 ಗಂಟೆಗೆ ಹಾವೇರಿ ಜಿಲ್ಲೆಯ ಶೇಷಗಿರಿ ಗ್ರಾಮದ ಶ್ರೀ ಗಜಾನನ ಯುವಕ ಮಂಡಳಿ ತಂಡದಿಂದ ಜ್ಞಾನಪೀಠ ಪುರಸ್ಕೃತ ಲೇಖಕ ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಆಧಾರಿತ ‘ವಾಲಿ ವಧೆ’ ನಾಟಕ ಪ್ರದರ್ಶನಗೊಳ್ಳಲಿದೆ. ಗಣೇಶ ಮಂದರ್ತಿ ಇವರು ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಪದ್ಮಶ್ರೀ ಎಮ್.ಎಸ್. ಸತ್ಯು ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಇವರಿಗೆ ಇದೇ ಸಂದರ್ಭದಲ್ಲಿ ರಂಗ ಗೌರವ ನೀಡಲಾಗುವುದು.
ದಿನಾಂಕ 10 ಜುಲೈ 2025ರಂದು ಸಂಜೆ 6-30 ಗಂಟೆಗೆ ಕನ್ನಡ ರಂಗಭೂಮಿಯಲ್ಲಿ ಹೊಸ ಮಾದರಿಯ ರಂಗ ಪ್ರಯೋಗಗಳ ಅನ್ವೇಷಣೆಯ ನಿರ್ದಿಗಂತ ತಂಡದವರಿಂದ ‘ಮೈ ಮನಗಳ ಸುಳಿಯಲ್ಲಿ’ ಕಾದಂಬರಿಯ ರಂಗ ರೂಪ ಪ್ರಸ್ತುತಗೊಳ್ಳಲಿದೆ. ಅಮಿತ್ ಜೆ. ರೆಡ್ಡಿ ಇವರು ರಂಗ ಪಠ್ಯ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಇದೇ ಸಂದರ್ಭದಲ್ಲಿ ಪ್ರಕಾಶ್ ರಾಜ್ ಇವರಿಗೆ ರಂಗ ಗೌರವ ನೀಡಲಾಗುವುದು.
ದಿನಾಂಕ 11 ಜುಲೈ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ಸೆಂಟರ್ ಫಾರ್ ಸಿನಿಮಾ ಮತ್ತು ಡ್ರಾಮಾ ತಂಡದಿಂದ ಡಾ. ಎಸ್.ಎಲ್. ಭೈರಪ್ಪ ಇವರ ಶ್ರೇಷ್ಠ ಕಾದಂಬರಿ ‘ಪರ್ವ’ ಪ್ರಕಾಶ್ ಬೆಳವಾಡಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದ್ದು, ಇದೇ ಸಂದರ್ಭದಲ್ಲಿ ಇವರಿಗೆ ರಂಗ ಗೌರವ ನೀಡಲಾಗುವುದು.