ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ʼಕಾವ್ಯಾಂ ವ್ಹಾಳೊ-4ʼ ಶೀರ್ಷಿಕೆಯಡಿ ಕವಿಗೋಷ್ಟಿಯು ದಿನಾಂಕ 05 ಜುಲೈ 2025ರಂದು ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಮೊದಲು ಹಿರಿಯ ಬರಹಗಾರರಾದ ಶ್ರೀ ಎಡ್ವಿನ್ ನೆಟ್ಟೊ (ಎಡಿ ನೆಟ್ಟೊ)ರವರು ಅಸ್ವಸ್ಥರಿರುವ ಕಾರಣ, ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಅರುಣ್ ಜಿ. ಶೇಟ್ ಮಾತನಾಡಿ “ವಿವಿಧ ಪ್ರಕಾರಗಳಿರುವ ಕೊಂಕಣಿ ಭಾಷೆಯು, ವಿವಿಧ ವೈವಿಧ್ಯತೆಗಳನ್ನು ಹೊಂದಿದೆ. ಅಕಾಡೆಮಿಯ ಪ್ರಶಸ್ತಿ ಗಳಿಸುವುದು ಜೀವನದ ಅತೀ ದೊಡ್ಡ ಸಾಧನೆ. ಅಕಾಡೆಮಿಯು ಸ್ವಂತ ಕಟ್ಟಡವನ್ನು ಹೊಂದಲಿ ಎಂದು ಆಶಿಸುತ್ತೇನೆ” ಎಂದರು. ಪ್ರಮುಖ ಭಾಷಣಕಾರರಾದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ವೆಂಕಟೇಶ್ ನಾಯಕ್ ಇವರು ಸಾಹಿತ್ಯ, ಕವಿತೆ ಹಾಗೂ ಅಕಾಡೆಮಿ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಶ್ರೀಮತಿ ಜೋಯ್ಸ್ ಕಿನ್ನಿಗೋಳಿ, ಶ್ರೀ ಹೆನ್ರಿ ಮಸ್ಕರೇನ್ಹಸ್, ಶ್ರೀ ಎಡ್ವರ್ಡ್ ಲೋಬೊ, ಶ್ರೀ ಲಾರೆನ್ಸ್ ಬ್ಯಾಪ್ಟಿಸ್ಟ್, ಶ್ರೀಮತಿ ಜೂಲಿಯೆಟ್ ಫೆರ್ನಾಂಡಿಸ್, ಶ್ರೀ ರಾಬರ್ಟ್ ಡಿಸೋಜ, ಶ್ರೀ ವಾಸುದೇವ ಶ್ಯಾನ್ಭಾಗ್, ಶ್ರೀಮತಿ ಕುಸುಮಾ ಕಾಮತ್, ಶ್ರೀ ಮೆಲ್ವಿನ್ ವಾಸ್ ನೀರುರ್ಮಾರ್ಗ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.
ಅಕಾಡೆಮಿ ಸದಸ್ಯರಾದ ಶ್ರೀ ನವೀನ್ ಲೋಬೊ, ಶ್ರೀ ದಯಾನಂದ ಮಡ್ಕೇಕರ್, ಶ್ರೀಮತಿ ಸಪ್ನಾ ಮೇ ಕ್ರಾಸ್ತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಶ್ರೀ ರೋನಾಲ್ಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿ, ಅಕಾಡೆಮಿ ಸದಸ್ಯರಾದ ಶ್ರೀ ಸಮರ್ಥ್ ಭಟ್ ಧನ್ಯವಾದ ಸಮರ್ಪಿಸಿದರು.