ಬೆಂಗಳೂರು : ರಾಮಕೃಷ್ಣ ಮಠ, ಬುಲ್ ಟೆಂಪುಲ್ ರಸ್ತೆ, ಬಸವನಗುಡಿ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ರಾಮಕೃಷ್ಣ ಸಂಗೀತ ಸೌರಭ’ ಕಾರ್ಯಕ್ರಮವನ್ನು ದಿನಾಂಕ 11, 12 ಮತ್ತು 13 ಜುಲೈ 2025ರಂದು ಪ್ರತಿ ದಿನ ಸಂಜೆ 6-00 ಗಂಟೆಗೆ ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 11 ಜುಲೈ 2025ರಂದು ಪಂಡಿತ್ ವೆಂಕಟೇಶ್ ಕುಮಾರ ಇವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನಕ್ಕೆ ಪಂಡಿತ್ ರಘುನಾಥ ನಾಕೋಡ್ ಇವರು ತಬಲಾ ಮತ್ತು ಪಂಡಿತ್ ವ್ಯಾಸಮೂರ್ತಿ ಕಟ್ಟಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ದಿನಾಂಕ 12 ಜುಲೈ 2025ರಂದು ವಿದ್ವಾನ್ ಡಿ. ಬಾಲಕೃಷ್ಣ ಇವರ ಕರ್ಣಾಟಕ ಸಂಗೀತ ವೀಣಾ ವಾದನಕ್ಕೆ ವಿದ್ವಾನ್ ವಿ. ವಂಶಿಧರ ಕೊಳಲು, ವಿದ್ವಾನ್ ಬಿ.ಎಸ್. ಪ್ರಶಾಂತ ಮೃದಂಗಂ ಹಾಗೂ ವಿದ್ವಾನ್ ಶಮಿತ್ ಗೌಡ ಘಟಂನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 13 ಜುಲೈ 2025ರಂದು ಕುಮಾರ್ ಮೋದಕ ಮತ್ತು ವೃಂದದವರಿಂದ ಗಾಯನ, ಕುಮಾರ್ ಪ್ರದ್ಯುಮ್ನ ಕರ್ಪೂರ್ ತಬಲಾ ಸೋಲೋ ಮತ್ತು ಕುಮಾರ್ ಚಿನ್ಮಯ್ ಮತ್ತು ಪಾರ್ಟಿ ಇವರಿಂದ ವೀಣಾ ವಾದನ ಪ್ರಸ್ತುತಗೊಳ್ಳುಲಿದೆ.