ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಕಥೆ ಮತ್ತು ಲಲಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕಥೆ ಮತ್ತು ಲಲಿತ ಪ್ರಬಂಧ ಸ್ವಂತ ರಚನೆಯಾಗಿರಬೇಕು. ಪ್ರಕಟಿತ ಮತ್ತು ಅನುವಾದಿತ ಬರಹಗಳಿಗೆ ಅವಕಾಶವಿಲ್ಲ. ಕಥೆ, ಲಲಿತ ಪ್ರಬಂಧ ಒಂದು ಸಾವಿರ ಪದಗಳನ್ನು ಮೀರಬಾರದು. ಹೊಸ ಆಲೋಚನೆ, ಹೊಸ ಹೊಳಹುಗಳ ಬರಹವಾಗಿರಬೇಕು.
ಕಥಾ ವಿಭಾಗ ಹಾಗೂ ಲಲಿತ ಪ್ರಬಂಧ ವಿಭಾಗಗಳಲ್ಲಿ ಪ್ರಥಮ ಬಹುಮಾನ ರೂ.3 ಸಾವಿರ, ದ್ವಿತೀಯ ಬಹುಮಾನ ರೂ.2 ಸಾವಿರ, ತೃತೀಯ ಬಹುಮಾನ ರೂ.1 ಸಾವಿರ ಒಳಗೊಂಡಿದೆ. ಒಬ್ಬರೇ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ಬರಹ ಕಳಿಸಲು ದಿನಾಂಕ 04 ಆಗಸ್ಟ್ 2025 ಅಂತಿಮ ದಿನವಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.