ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವಗ್ರಹ ಗುಡಿಯಲ್ಲಿ ದಿನಾಂಕ 06 ಜುಲೈ 2025ರಂದು ತಾಳಮದ್ದಳೆ ‘ವಾಲಿ ಮೋಕ್ಷ’ ಎಂಬ ಆಖ್ಯಾನದೊಂದಿಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಎಲ್.ಎನ್. ಭಟ್ ಬಟ್ಯಮೂಲೆ, ಸತೀಶ್ ಇರ್ದೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಮಾಸ್ಟರ್ ಸಮರ್ಥ ವಿಷ್ಣು ಮತ್ತು ಮಾಸ್ಟರ್ ಸನತ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಗುಡ್ಡಪ್ಪ ಬಲ್ಯ (ಶ್ರೀರಾಮ), ಗುಂಡ್ಯಡ್ಕ ಈಶ್ವರ ಭಟ್ (ವಾಲಿ), ಮಾಂಬಾಡಿ ವೇಣುಗೋಪಾಲ ಭಟ್ (ಸುಗ್ರೀವ) ಮತ್ತು ಸುಬ್ಬಯ್ಯ ರೈ ಸುಳ್ಯಪದವು (ತಾರೆ )ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸಂಘದ ಗೌರವ ಕಾರ್ಯದರ್ಶಿ ರಂಗನಾಥ ರಾವ್ ಸಹಕರಿಸಿದರು.