ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃ ತಿಕ ಟ್ರಸ್ಟ್ ಹಾಗೂ ಜೇನುಗೂಡು ಕಲಾ ಬಳಗವು ಜಂಟಿಯಾಗಿ ಆಯೋಜಿಸಿದ ಸಾಹಿತಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಬರೆದ ‘ದ ಕಂಪ್ಯಾರಿಟಿವ್ ಸ್ಟಡಿ ಆಫ್ ಡ್ರಮಾಟಿಕ್ ಥಿಯರೀಸ್ ಇನ್ ಟಿ. ಎಸ್ ಎಲಿಯಟ್ಸ್ ಪ್ಲೇಸ್’ ಕೃತಿಯ ಲೋಕರ್ಪಣಾ ಸಮಾರಂಭವು ದಿನಾಂಕ 06 ಜುಲೈ 2025ರ ಭಾನುವಾರದಂದು ಬೆಂಗಳೂರಿನ ಶೇಷಾದ್ರಿಪುರ ಶಿಕ್ಷಣ ದತ್ತಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಶೇಷಾದ್ರಿಪುರ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ಡಾ.ವೂಡೇ ಪಿ. ಕೃಷ್ಣ ಮಾತನಾಡಿ “ಕುವೆಂಪು ಸಾರಿದ ಸರ್ವ ಜನಾಂಗದ ಶಾಂತಿಯ ತೋಟದ ಚಿಂತನೆ ಮತ್ತು ಪುಸ್ತಕವನ್ನು ಓದುವ ಹವ್ಯಾಸವು ಯುವ ಪೀಳಿಗೆಯಲ್ಲಿ ಬರಬೇಕು. ಪ್ರಸ್ತುತ ಅಧ್ಯಾಪಕರು ಪಾಠ ಬಿಟ್ಟು ಇತರ ಪುಸ್ತಕವನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರಿಂದ ಮುಂದಿನ ದಿನಗಳಲ್ಲಿ ಅಧ್ಯಾಪಕರು ಬೋಧನೆಯೊಂದಿಗೆ ಪುಸ್ತಕ ಓದುವ ಬಗ್ಗೆ ಆಸಕ್ತಿ ತೋರಬೇಕು” ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬಂಜಗೆರೆ ಜಯಪ್ರಕಾಶ್ ಮಾತನಾಡಿ “ನಾಟಕಕಾರ ಎಲಿಯೇಟ್ಸ್ ಅವರಿಗೆ ಧಾರ್ಮಿಕ ಮೌಲ್ಯಗಳು ಬೇರೆ, ಸಾಂಸ್ಕೃತಿಕ ಧರ್ಮಗಳು ಬೇರೆ ಎನ್ನುವ ನಂಬಿಕೆ ಇತ್ತು. ಅದನ್ನು ಲೇಖಕ ಚಿನ್ನು ಪ್ರಕಾಶ್
ಬರೆದಿದ್ದಾರೆ” ಎಂದು ಹೇಳಿದರು.
ಈ ವೇಳೆ ವಿಶ್ರಾಂತ ಕೃಷಿ ಅಧಿಕಾರಿ ಡಾ. ಜಿ. ಟಿ. ಚಿಕ್ಕಪುಟ್ಟೇಗೌಡ, ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಸಂಗಮೇಶ ಗೌಡಪ್ಪನವರ, ಪ್ರಾಂಶುಪಾಲ ಪ್ರೊ. ಎಂ. ಮುನಿಸ್ವಾಮಿ ಹಾಗೂ ಉಪನ್ಯಾಸಕಿ ಸುನಿತಾ ಎಸ್. ಅವಿನಾಶ್ ಅವರಿಗೆ ಸೇವಾ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ಎಸ್. ರಾಮಲಿಂಗೇಶ್ವರ, ಲೇಖಕ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ, ವಿಮರ್ಶಕಿ ಡಾ. ಭಾಗ್ಯಲಕ್ಷ್ಮೀ ವಿ. ಮುಂತಾದವರು ಉಪಸ್ಥಿತರಿದ್ದರು.