ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಖ್ಯಾತ ಸಾಹಿತಿಗಳಾದ ಜೊ. ಸಾ. ಆಲ್ವಾರಿಸ್‌ರವರು ರಚಿಸಿದ ಕೊಂಕಣಿ ಭಾಷೆಯ ಕನ್ನಡ ಲಿಪಿಯ ಪ್ರಪ್ರಥಮ ಕಾದಂಬರಿ ಪ್ರಕಟವಾಗಿ 75 ವರ್ಷ ತುಂಬುವ ಸಂದರ್ಭದಲ್ಲಿ, ʼಆಂಜೆಲ್-75 ʼ ಶೀರ್ಷಿಕೆಯಡಿ ಕಾರ್ಯಾಗಾರವು ದಿನಾಂಕ 13 ಜುಲೈ 2025ರಂದು ಅಕಾಡೆಮಿ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ವಹಿಸಿಕೊಳ್ಳಲ್ಲಿದ್ದು, ಮುಖ್ಯ ಅತಿಥಿಯಾಗಿ ಡಾ. ಶಿವರಾಮ ಕಾರಂತ ಟ್ರಸ್ಟಿ ಇದರ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರ್, ಕೊಂಕಣಿ ನಾಟಕ ಸಭೆಯ ಅಧ್ಯಕ್ಷರಾದ ವಂ.ರೊಕಿ ಡಿಕುನ್ಹಾ ಹಾಗೂ ಗೌರವ ಅತಿಥಿಗಳಾಗಿ ದಿ. ಜೊ. ಸಾ. ಆಲ್ವಾರಿಸ್ ಇವರ ಧರ್ಮಪತ್ನಿ ಶ್ರೀಮತಿ ಮೋನಿಕಾ ಆಲ್ವಾರಿಸ್ ಭಾಗವಹಿಸಲಿದ್ದಾರೆ.

