ಹಂಗಾರಕಟ್ಟೆ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ಸಂಸ್ಕೃತಿ ಸಂಭ್ರಮದಲ್ಲಿ ‘ಯಕ್ಷ ವರ್ಷ’ ಕಾರ್ಯಕ್ರಮದಡಿಯಲ್ಲಿ ಶ್ರೀ ಮಹಿಷಮರ್ದಿನೀ ಯಕ್ಷಕಲಾ ಪ್ರತಿಷ್ಠಾನ (ರಿ.) ಚಾರ-ಹೆಬ್ರಿ ಇವರ ಸಂಯೋಜನೆಯಲ್ಲಿ ಚಾರ ಪ್ರದೀಪ ಹೆಬ್ಬಾರ್ ರಚಿತ “ಉಲೂಪಿ ನಂದನ” ಯಕ್ಷಗಾನ ‘ತಾಳಮದ್ದಲೆ’ಯು ದಿನಾಂಕ 13 ಜುಲೈ 2025ರ ಭಾನುವಾರದಂದು ಸಂಜೆ ಘಂಟೆ 3.00 ರಿಂದ ನಡೆಯಲಿದೆ.
ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸರ್ವಶ್ರೀಗಳಾದ ಶಿವಕುಮಾರ ಭಟ್ ಹರಿಹರಪುರ, ದೇವದಾಸ ರಾವ್ ಕೂಡ್ಲಿ, ರಾಮಕೃಷ್ಣ ಮಂದರ್ತಿ, ವೈಕುಂಠ ಹೇರ್ಳೆ ಗುಂಡ್ಮಿ, ಆನಂದ ಭಟ್ ಕೆಕ್ಕಾರ್, ಡಾ. ಶಿವಕುಮಾರ್ ಅಳಗೋಡು, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಸತೀಶ ಬೇಳಂಜೆ, ಚಾರ ಪ್ರದೀಪ ಹೆಬ್ಬಾರ್ ಭಾಗವಹಿಸಲಿದ್ದಾರೆ.

