ಉಡುಪಿ : ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 12 ಜುಲೈ 2025ರಂದು ಅಪರಾಹ್ನ 4-30 ಗಂಟೆಗೆ ಉಡುಪಿಯ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿ ಇವರ ವಹಿಸಲಿದ್ದು, ಪ್ರವರ್ತಕರಾದ ಪ್ರಮೋದ ಹೆಗಡೆ ಇವರು ಶುಭಾಶಂಸನೆಗೈಯ್ಯಲಿದ್ದಾರೆ. ಹಿರಿಯ ತಾಳಮದ್ದಲೆ ಅರ್ಥಧಾರಿ ಹಾಗೂ ಹವ್ಯಾಸಿ ವೇಷಧಾರಿಗಳಾದ ಡಾ. ಜಿ.ಎಲ್. ಹಗಡೆ ಕುಮಟಾ ಇವರಿಗೆ ‘ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ’ ಮತ್ತು ಸರ್ಪಂಗಳ ಈಶ್ವರ ಭಟ್ ಸುರತ್ಕಲ್ ಇವರಿಗೆ ‘ಪೆರ್ಲ ಕೃಷ್ಣ ಭಟ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಅಪರಾಹ್ನ 1-30 ಗಂಟೆಗೆ ‘ಕರ್ಣಾರ್ಜುನ’ ಎಂಬ ಪ್ರಸಂಗದ ತಾಳಮದ್ದಲೆ ಜರಗಲಿದೆ.