ಕುಕನೂರು : ಚುಟುಕು ಸಾಹಿತ್ಯ ಪರಿಷತ್ ಕುಕನೂರು ತಾಲೂಕಿನ ನೂತನ ಅಧ್ಯಕ್ಷರಾಗಿ ಶಿಕ್ಷಕ ಬಸವರಾಜ್ ಉಪ್ಪಿನ್ ನೇಮಕವಾಗಿದ್ದಾರೆ.
ಚು. ಸಾ. ಪ. ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಇವರು ಕೊಪ್ಪಳದಲ್ಲಿ ನಡೆದ ಚುಟುಕು ಸಾಹಿತ್ಯ ಪರಿಷತ್ ಇದರ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕಿಗೆ ಕ್ರಿಯಾಶೀಲ ಶಿಕ್ಷಕ, ಉತ್ಸಾಹಿ ಸಾಹಿತಿ ಬಸವರಾಜ್ ಉಪ್ಪಿನ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.
ಪ್ರಸ್ತುತ ಕುಕನೂರು ತಾಲೂಕಿನ ಗಾವರಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಇದರ ಜೊತೆಗೆ ಕುಕನೂರು ತಾಲೂಕು ಪದವೀಧರ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಹಲವಾರು ಲೇಖನ, ಕಥೆ, ಕವನಗಳು ಪ್ರಕಟಗೊಂಡಿವೆ. ಅಲ್ಲದೇ ಶ್ರೀಯುತರು ಇನ್ನೂರಕ್ಕೂ ಹೆಚ್ಚು ಆಧುನಿಕ ವಚನಗಳನ್ನು ರಚಿಸಿದ್ದಾರೆ. ಕನ್ನಡದ ಕ್ರಿಯಾಶೀಲ ಶಿಕ್ಷಕರಾಗಿ, ಕನ್ನಡ ಮತ್ತು ಇಂಗ್ಲಿಷ್ ಗ್ರಾಮರ್ ಪುಸ್ತಕ ಬರೆದು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉಪಯುಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಟಿ. ಈ. ಟಿ. ಮಾರ್ಗದರ್ಶಿ, ಪರೀಕ್ಷಾ ಮಾರ್ಗದರ್ಶಿ, ಇಂಗ್ಲಿಷ್ ವ್ಯಾಕರಣ ಸೇರಿ ಹಲವು ಉಪಯುಕ್ತ ಪುಸ್ತಕ ಬರೆದು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಯಾಗಿದ್ದಾರೆ.
ಶ್ರೀಯುತರು ಶಿಕ್ಷಕ ಶ್ರೀ, ಪಂಡಿತ್ ಪುಟ್ಟರಾಜ ಗವಾಯಿಗಳ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ಸಾಹಿತ್ಯ ರತ್ನ, ಕಾಯಕ ರತ್ನ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಸ್ವಪ್ನ ಬುಕ್ ಹೌಸ್ ವತಿಯಿಂದ ಪುಸ್ತಕಗಳ ಬಿಡುಗಡೆ ಸಮಾರಂಭ | ಜುಲೈ 12