ಬೆಂಗಳೂರು : ಸ್ವಪ್ನ ಬುಕ್ ಹೌಸ್ ಭಾರತದ ಅತಿ ದೊಡ್ಡ ಪುಸ್ತಕ ಭಂಡಾರ ಇದರ ವತಿಯಿಂದ 15 ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 12 ಜುಲೈ 2025ರಂದು ಸಂಜೆ 5-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಚಲನ ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕನ್ನಡ ಪ್ರಭ ಪ್ರಧಾನ ಪುರವಣಿ ಸಂಪಾದಕರಾದ ಜೋಗಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಿ.ವಿ. ಗುರುಪ್ರಸಾದ್ ಇವರ ಅಂಕಣ ಬರಹಗಳು : ‘ಕೈಂ ಡೈರಿ’ ಭಾಗ 1-4 ಮತ್ತು ‘ಕೊಕೇನ್ ರಾಜರಹಸ್ಯ’, ಎಚ್. ಡುಂಡಿರಾಜ್ ಅವರ ನಗೆಬರಹಗಳು : ‘ನೀವು ಹೆಂಡತಿಗೆ ಹೆದರುತ್ತೀರಾ?’, ಎಂ.ಕೆ. ಇಂದಿರಾ ಅವರ ಕಾದಂಬರಿಗಳು : ‘ಪೂರ್ವಾಪರ’, ‘ಆತ್ಮಸಖಿ’, ‘ಬ್ರಹ್ಮಚಾರಿ’, ‘ಆಭರಣ’, ‘ವಿಚಿತ್ರ ಪ್ರೇಮ’ ಮತ್ತು ‘ಯಾರು ಹಿತವರು’, ಜಯಪ್ರಕಾಶ್ ನಾಗತಿಹಳ್ಳಿಯವರ ಬರಹಗಳ ಸಂಗ್ರಹ ‘ಲೈಫು ನಂದೇನೆ’, ‘ವ್ಯಕ್ತಿತ್ವ ದರ್ಪಣ’ ಮತ್ತು ‘ವ್ಯಕ್ತಿತ್ವ ಪರಿವರ್ತನೆ’ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.