ಬೆಂಗಳೂರು : ವಿಜ್ಞಾನ, ರಂಗಭೂಮಿ ಮತ್ತು ಶಿಕ್ಷಣದಲ್ಲಿ ಆಸಕ್ತಿ ಇರುವ ಶಿಕ್ಷಕರಿಗೆ ಉತ್ತಮ ಅವಕಾಶ. ಎನ್.ಸಿ.ಬಿ.ಎಸ್. ಆರ್ಕೈವ್ಸ್ ನಲ್ಲಿರುವ ವಿಜ್ಞಾನ ಸಂಬಂಧಿ ಪತ್ರಗಳು, ಕ್ಷೇತ್ರ ಟಿಪ್ಪಣಿಗಳು ಹಾಗೂ ಮೌಖಿಕ ಇತಿಹಾಸದ ಸಂಗ್ರಹವನ್ನು ಆಧರಿಸಿ ನಾಟಕ ರಚಿಸುವ ವಿಶಿಷ್ಟ ಕಮ್ಮಟವಿದು. ಆನ್ಲೈನ್ ಮತ್ತು ಮುಖಾಮುಖಿ ಸಂವಾದದ ಮೂಲಕ ಮೂರು ವಾರಗಳ ಕಾಲ ಈ ಕಮ್ಮಟವನ್ನು ನಡೆಸಲಾಗುವುದು. ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಈ ಅವಕಾಶವಿದೆ. ರಂಗಭೂಮಿಯ ಅನುಭವವಿರುವ ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜುಲೈ 2025.
ಅರ್ಜಿ ಸಲ್ಲಿಸಲು ಲಿಂಕ್ : https://docs.google.com/forms/d/1qR4rzHaP27bqDVkv78Z-gCA3vCs2u-0aMFakLC8ohiY/edit
ಹೆಚ್ಚಿನ ಮಾಹಿತಿಗೆ : https://archives.ncbs.res.in/node/1007