ಬೆಂಗಳೂರು : ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ ಇದರ ವತಿಯಿಂದ ‘ಕನ್ನಡ ಸಾಹಿತ್ಯ ಸಂಭ್ರಮ 2025’ ಸಮಾರಂಭವನ್ನು ದಿನಾಂಕ 13 ಜುಲೈ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ಬನಶಂಕರಿಯಲ್ಲಿರುವ ಜೆ.ಎಸ್.ಎಸ್. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಕಾವ್ಯ ವಾಚನ, ಉಪನ್ಯಾಸ, ಕೃತಿ ಬಿಡುಗಡೆ, ವಿವಿಧ ಕ್ಷೇತ್ರದ ಸಾಧಕರಿಗೆ ‘ಸ್ಟಾರ್ ಆಫ್ ಕರ್ಣಾಟಕ 2025’, ಹಿರಿಯ ಶಿಕ್ಷಕರಿಗೆ ಸದ್ಗುರು ದ್ರೋಣಾಚಾರ್ಯ ಮತ್ತು 30 ಸರಕಾರಿ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.