ಮುಂಡಗೋಡ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುಂಡಗೋಡ ಮತ್ತು ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.) ರಾಜ್ಯ ಸಮಿತಿ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 13 ಜುಲೈ 2025ರಂದು ಮಧ್ಯಾಹ್ನ 2-00 ಗಂಟೆಗೆ ಮುಂಡಗೋಡ ನಿವೃತ್ತ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಗೋಡ ಕ.ಸಾ.ಪ. ಇದರ ಅಧ್ಯಕ್ಷರಾದ ವಸಂತ ಕೊಣಸಾಲಿ ಇವರು ವಹಿಸಲಿದ್ದು, ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ರಾಜ್ಯಾಧ್ಯಕ್ಷರಾದ ಎಸ್.ಡಿ. ಮುಡೆಣ್ಣವರ ಇವರ ಉದ್ಘಾಟಿಸಲಿದ್ದಾರೆ. ‘ಪತ್ರಿಕಾ ರಂಗ ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ಪ್ರಾಧ್ಯಾಪಕರಾದ ಡಾ. ಮಂಜಣ್ಣ ಜಂಗವಾಡ ಇವರು ಉಪನ್ಯಾಸ ನೀಡಲಿದ್ದು, ಎಸ್.ಕೆ. ಬೋರ್ಕರ, ಎಸ್.ಬಿ. ಹೂಗಾರ ಮತ್ತು ಶ್ರೀಮತಿ ನಂದಾ ನರಗುಂದ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.