ಮಂಗಳೂರು : ಜನಪದ ಪಾಡ್ದನ ಕಲಾವಿದ ಬೊಳ್ಳಾಜೆ ಬಾಬಣ್ಣ (71 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಿನ್ನಕ 11 ಜುಲೈ 2025ರಂದು ದಿವಂಗತರಾದರು. ತುಳುನಾಡಿನ ಹಲವಾರು ದೈವಗಳ ಪಾಡ್ದಾನ ಬಲ್ಲವರಾಗಿದ್ದು, ಆಕಾಶವಾಣಿ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಡ್ದನವನ್ನು ಹಾಡುತ್ತಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಡೈಜೀವರ್ಲ್ಡ್ ವಾಹಿನಿಯಲ್ಲಿ ಇವರ ಪಾಡ್ದನ ದಾಖಲೀಕರಣದೊಂದಿಗೆ ಪ್ರದರ್ಶನಗೊಂಡಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನಿತರಾಗಿದ್ದು, ಹಲವಾರು ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದರು. ಇತ್ತೀಚೆಗೆ ಕಾಂತಾರ ಚಲನಚಿತ್ರ ತಂಡಕ್ಕೆ ಪಾಡ್ದಾನವನ್ನು ಹಾಡಿದ್ದರು. ಆದಿ ದ್ರಾವಿಡ ಸಮುದಾಯದ ಹಿರಿಯ ನೇತಾರರಾಗಿದ್ದು, ಸಮುದಾಯದ ಕುಲ ಸತ್ಯಗಳಾದ ಸತ್ಯ ಸಾರಮಣಿ ದೈವಗಳ ಪಾಡ್ದಾನದ ಆಕರವಾಗಿ ಸಮುದಾಯಕ್ಕೆ ಮಾರ್ಗದರ್ಶಕರಾಗಿದ್ದರು. ಒಂದು ಗಂಡು,ಮೂರು ಹೆಣ್ಣು ಮಕ್ಕಳು, ಶಿಷ್ಯಂದಿರು ಮತ್ತು ಅಪಾರ ಭಂದುವರ್ಗವನ್ನು ಅಗಲಿದ್ದಾರೆ.