ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಹಯೋಗದೊಂದಿಗೆ ಭರತನಾಟ್ಯ ತರಗತಿಯ ಗುರು ಶ್ರೀಮತಿ ಅಮೃತಾ ಉಪಾಧ್ಯ ಇವರಿಗೆ ಗುರುವಂದನೆ ಕಾರ್ಯಕ್ರಮವು ದಿನಾಂಕ 12 ಜುಲೈ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಗುರು ಲಂಬೋದರ ಹೆಗಡೆ ಮಾತನಾಡಿ “ಗುರಿ ಮುಂದಿರಬೇಕು, ಗುರು ಹಿಂದಿರಬೇಕು. ಗುರಿಯನ್ನು ನೆರವೇರಿಸುವಲ್ಲಿ ಗುರು ಮಹತ್ವದ ಪಾತ್ರ ವಹಿಸುತ್ತಾನೆ. ಭರತನಾಟ್ಯದಲ್ಲಿ ವೇದಿಕೆಯನ್ನು ಬಳಸಿಕೊಳ್ಳಬೇಕಾದರೆ ಗುರುವಿಗೆ ವಿಶೇಷ ಸ್ಥಾನವಿದೆ. ಶಿಷ್ಯರು ಗುರುವಿಗೆ ವಂದಿಸಿಯೇ, ಗುರುವನ್ನು ಅವಲಂಬಿಸಿಯೇ ವೇದಿಕೆಯಲ್ಲಿ ವಿಜೃಂಬಿಸುತ್ತಾರೆ. ಗುರು ದಿನವನ್ನು ಮಹತ್ವಪೂರ್ಣವಾಗಿಸಬೇಕಾದದ್ದು ಶಿಷ್ಯನ ಆದ್ಯ ಕರ್ತವ್ಯ” ಎಂದರು.
ಕಾರ್ಯಕ್ರಮದಲ್ಲಿ ಶಿಷ್ಯರನೇಕರು ಗುರುವನ್ನು ಗೌರವಿಸಿ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Articleಯಶಸ್ವಿಯಾಗಿ ನಡೆದ ಮುಂಗಾರು ಕವಿಗೋಷ್ಠಿ – 2025