ಬೆಂಗಳೂರು : ಅಭಿನಯ ತರಂಗ ನಾಟಕ ಶಾಲೆ ಇದರ ವತಿಯಿಂದ ‘ಅಂತರಂಗದ ರಂಗ’ ಅಭಿನಯ ಶಿಬಿರವನ್ನು ದಿನಾಂಕ 01 ಆಗಸ್ಟ್ 2025ರಿಂದ 15 ಆಗಸ್ಟ್ 2025ರವರೆಗೆ ಬೆಂಗಳೂರಿನ ಹನುಮಂತ ನಗರದಲ್ಲಿರುವ ಶ್ರೀ ಬಾಲಾಜಿ ವಿದ್ಯಾ ನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಸಂಜೆ 6-00ರಿಂದ 9-00 ರ ತನಕ ಹಾಗೂ ಭಾನುವಾರ ಬೆಳಗ್ಗೆ 10-00 ರಿಂದ ಸಂಜೆ 5-00 ತನಕ ನಡೆಯಲಿರುವ ಈ ಶಿಬಿರದಲ್ಲಿ ಕಾನ್ಸ್ಟಾಂಟಿನ್ ಸ್ಟಾನಿಸ್ಲಾವಸ್ಕಿಯ ವಾಸ್ತವವಾದಿ ಅಭಿನಯ ಸಿದ್ಧಾಂತದ ಪ್ರಸಿದ್ಧ ಪುಸ್ತಕವನ್ನು ಆಧರಿಸಿದ ಪ್ರಾಯೋಗಿಕ ಅಭ್ಯಾಸ. ಮಂಜುನಾಥ್ ಎಲ್. ಬಡಿಗೇರ ಇವರು ಈ ಶಿಬಿರದ ನಿರ್ದೇಶಕರಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9845825217 ಸಂಖ್ಯೆಯನ್ನು ಸಂಪರ್ಕಿಸಿರಿ.