ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ (ರಿ.) ತೆಕ್ಕಟ್ಟೆ ಆಶ್ರಯದಲ್ಲಿ ನಡೆಯುವ ವು ದಿನಾಂಕ 13 ಜುಲೈ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಗುರು ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ ಇವರು ಸಂಗೀತ ಗುರು ಶಾರದ ಹೊಳ್ಳ ಇವರನ್ನು ಗೌರವಿಸಿ ಮಾತನಾಡಿ “ಸಂಗೀತ ಕ್ಷೇತ್ರದ ಜ್ಞಾನಗಳು ಮಾನವನ ಬದುಕಿಗೆ ತೀರ ಅಗತ್ಯ. ಗುರುವಿನ ಗುಲಾಮನಾಗದೇ ಮುಕುತಿ ಇಲ್ಲ ಎಂದು ದಾಸರೇ ಉಲ್ಲೇಖಿಸಿದ್ದಾರೆ. ಮೊದಲು ಗುರುವಿನ ನಿರ್ದೇಶನಕ್ಕೊಳಪಡಬೇಕು. ಆಗಲೇ ಸಂಗೀತ ಅಭ್ಯಾಸಕ್ಕೆ ಪರಿಪೂರ್ಣತೆ ಸಾಧ್ಯ. ಗುರು ತಮ್ಮ ಅಮೂಲ್ಯ ಸಮಯವನ್ನು, ಕಲಿತ ಕಲೆಯನ್ನು ಕಲಿಸುವುದಕ್ಕಾಗಿ ಮೀಸಲಿಡುತ್ತಾರೆ. ಎಲ್ಲವೂ ಮೊಬೈಲ್‌ನಿಂದ ಸಾಧ್ಯವಿಲ್ಲ. ಆನ್‌ಲೈನ್‌ನಲ್ಲಿ ಕಲಿಕೆ ಪರಿಪೂರ್ಣತೆಯನ್ನು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಗುರುವಿನ ಮಹತ್ವ ತಿಳಿಯಲೂ ಸಾಧ್ಯವಿಲ್ಲ” ಎಂದರು. .
ರು ಶಾರದ ವಿ. ಹೊಳ್ಳ ಇವರನ್ನು ಶಿಷ್ಯರೊಂದಿಗೆ ಗೌರವಿಸಿ ಅಭಿನಂದನೆ ಸಲ್ಲಿಸಿದರು.
ರಂಗ ನಿರ್ದೇಶಕಿ ಸುಧಾ ಮಣೂರು, ಪಾರ್ವತಿ ಮೈಯ್ಯ, ಭಾಗ್ಯಲಕ್ಷ್ಮೀ ವೈದ್ಯ, ರಾಹುಲ್ ಕುಂದರ್ ಕೋಡಿ, ಸುಕುಮಾರ ಶೆಟ್ಟಿ ಕಮಲಶಿಲೆ ಉಪಸ್ಥಿತರಿದ್ದರು. ಪೂಜಾ ಆಚಾರ್ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ತೆಕ್ಕಟ್ಟೆಯ ಹಯಗ್ರೀವದಲ್ಲಿ ಸಂಗೀತ ಗುರು ಶಾರದ ವಿ. ಹೊಳ್ಳ ಇವರಿಗೆ ಗುರುವಂದನಾ ಕಾರ್ಯಕ್ರಮ
No Comments1 Min Read
Previous Articleಅಭಿನಯ ತರಂಗ ವತಿಯಿಂದ ‘ಅಂತರಂಗದ ರಂಗ’ ಅಭಿನಯ ಶಿಬಿರ | ಆಗಸ್ಟ್ 01ರಿಂದ 15