ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಯೋಜಿಸುತ್ತಿರುವ ಸರಣಿ ಕರೋಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 12 ಜುಲೈ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರೋಕೆ ಸಂಗೀತದ ಪ್ರಸಿದ್ಧ ಗಾಯಕ ರಾಘವೇಂದ್ರ ಕೋಟೇಶ್ವರ ಮಾತನಾಡಿ “ಶಾಸ್ತ್ರೀಯವಾಗಿ ಸಂಗೀತ ಕಲಿತವರಿಗೆ ಕರೋಕೆ ಸಂಗೀತ ಅಭ್ಯಾಸ ಹತ್ತಿರವಾಗುತ್ತದೆ. ಈಜು ಕಲಿತು ಸಮುದ್ರದ ಆಳವನ್ನು ಲೆಕ್ಕ ಹಾಕಿದಂತೆ. ಕರೋಕೆ ಸಂಗೀತವು ಪ್ರಸಿದ್ಧಿ ಹೊಂದುವುದಕ್ಕೆ ಸುಲಭ ಸಾಧ್ಯವಾಗುತ್ತದೆ. ಶೃತಿಜ್ಞಾನ ಯಥೇಚ್ಛವಾಗಿ ಇದ್ದರೆ ಸಂಗೀತವು ಕಾರ್ಯಕ್ರಮದಲ್ಲಿ ಗೆಲ್ಲುತ್ತದೆ” ಎಂದರು.
ರಂಗಭೂಮಿ ಕಲಾವಿದೆ ಸುಧಾ ಮಣೂರು, ಪಾರ್ವತಿ ಮೈಯ್ಯ, ಭಾಗ್ಯಲಕ್ಷ್ಮೀ ವೈದ್ಯ, ಶ್ರೀಮತಿ ವಂದನಾ ರಾಘವೇಂದ್ರ, ಪ್ರಶಾಂತ್ ಪಡುಕೆರೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಭರತಾಂಜಲಿಯ ಕಿಂಕಿಣಿ ತ್ರಿಂಶತ್ ಸಂಭ್ರಮದಲ್ಲಿ ‘ನೃತ್ಯಾಮೃತಂ 2025’