ಬೆಂಗಳೂರು : ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇವರು ಕೊಡ ಮಾಡುವ ಹಳ್ಳೂರು ಹನುಮಂತಪ್ಪ ವರಮಹಾಲಕ್ಷ್ಮಮ್ಮ ರಾಜ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಿಸಲ್ಪಟ್ಟ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಗೆ ನೀಡಲಾಗಿದೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆ ‘ವಿಜಯವಾಣಿ ‘ಪತ್ರಿಕೆಯಿಂದ ಜಿಲ್ಲಾವಾರು ಆರಿಸಲ್ಪಟ್ಟಂತಹ ಸಾಧಕರಿಗೆ ಇದನ್ನು ನೀಡಲಾಗಿದೆ. ಗಮಕ, ಯಕ್ಷಗಾನ, ವಿವಿಧ ಕಲಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಗೆ ಈ ಪ್ರಶಸ್ತಿಯನ್ನು ದಿನಾಂಕ 6 ಜುಲೈ 2025ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಮಾರಂಭದಲ್ಲಿ ಮಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು. ಮೋಹನ ಕಲ್ಲೂರಾಯರ ಪರವಾಗಿ ಅವರ ಪುತ್ರ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ಬೆಂಗಳೂರಿನಲ್ಲಿ ಸನ್ಮಾನವನ್ನು ಸ್ವೀಕರಿಸಿದರು.ಮಧೂರು ಮೋಹನ ಕಲ್ಲೂರಾಯರು ದ.ಕ ಜಿಲ್ಲೆಯ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ.