ಮಂಗಳೂರು : ನಮ್ಮ ಕುಡ್ಲ ತುಳು ಚಾನೆಲ್ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ‘ಕವಿಗಳು ಕಂಡ ನಮ್ಮ ಕುಡ್ಲ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ‘ನಮ್ಮ ಕುಡ್ಲ’ ವಿಷಯದ ಬಗ್ಗೆ ಕವನ, ಕವಿತೆ ಮತ್ತು ಚುಟುಕು ಬರಹಗಳನ್ನು ತುಳು ಮತ್ತು ಕನ್ನಡದಲ್ಲಿ ವಾಚಿಸಲು ಆಹ್ವಾನಿಸಲಾಗಿದೆ.
25 ಕವಿಗಳಿಗೆ ನಮ್ಮ ಕುಡ್ಲ ನೇರಪ್ರಸಾರದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ದಿನಾಂಕ 20 ಜುಲೈ 2025ರ ಮುಂಚಿತವಾಗಿ 9741776139 ಸಂಖ್ಯೆಗೆ ಕವನ, ಕವಿತೆ ಮತ್ತು ಚುಟುಕು ಬರಹಗಳನ್ನು ವಾಟ್ಸ್ ಹ್ಯಾಪ್ ಮಾಡಿ ಜೊತೆಗೆ ತಮ್ಮ ವಿಳಾಸ, ಮೊಬೈಲ್ ನಂಬ್ರ ಮತ್ತು ಫೋಟೋ ಕಳುಹಿಸಿರಿ. ಆಯ್ಕೆಯಾದ ಕವಿತೆಗಳನ್ನು ಕೃತಿ ರೂಪದಲ್ಲಿ ಪ್ರಕಟಿಸಲಾಗುವುದು ಹಾಗೂ ಅತ್ಯುತ್ತಮ ಮೂರು ಕವಿತೆಗಳಿಗೆ ಆಕರ್ಷಕ ಬಹುಮಾನವಿದೆ.