ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ 30ನೇ ವರ್ಷದ ಸಂಭ್ರಮದ ಪ್ರಯುಕ್ತ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಶೀರ್ಷಿಕೆಯಲ್ಲಿ ಅನೇಕ ಯೋಜನೆಯಿದ್ದು, ಅದರ ಒಂದು ಪ್ರಯೋಗವಾಗಿ ‘ತ್ರಿಶಕ್ತಿ’ ಎಂಬ ಸಂಶೋಧನಾತ್ಮಕ ಪ್ರಸ್ತುತಿ ದಿನಾಂಕ 05 ಜುಲೈ 2025ರಂದು ಶಶಿಶಂಕರ ಸಭಾಂಗಣದಲ್ಲಿ ನಡೆಯಿತು.
ಚೆನ್ನೈನ ರೆನಾಲ್ಟ್ ನಿಸಾನ್ ತಂತ್ರಜ್ಞಾನ ಕೇಂದ್ರದ ಪ್ರಬಂಧಕರೂ, ವಿದ್ವಾನ್ ದೀಪಕ್ ಕುಮಾರ್ ಇವರ ಹಿರಿಯ ಭರತನಾಟ್ಯ ಶಿಷ್ಯರೂ ಆದ ಶ್ರೀ ಗುರುಪ್ರಸಾದ್ ಐ.ಆರ್. ಇವರು ನೃತ್ಯಕಲೆಯ ಮಹತ್ವವನ್ನು ಹೇಳಿದರು. ಸಂಸ್ಥೆಯ ಹಿರಿಯ ಕಲಾವಿದರಾದ ಗಿರೀಶ್ ಕುಮಾರ್, ಸೌಜನ್ಯ ಪಡ್ವೆಟ್ನಾಯ, ಅಕ್ಷತಾ ಕೆ., ವಸುಧಾ ಜಿ.ಎನ್., ಅಪೂರ್ವ ಗೌರಿ ದೇವಸ್ಯ, ಶಮಾ ಚಂದುಕೂಡ್ಲು, ಪ್ರಣಮ್ಯ ಪಾಲೆಚ್ಚಾರು ಮತ್ತು ವಿಭಾಶ್ರೀ ವಿ. ಗೌಡ ಇವರು ‘ತ್ರಿಶಕ್ತಿ’ ಎಂಬ ವಿಷಯಾಧಾರಿತ ನೃತ್ಯ ಪ್ರಸ್ತುತಿಗೈದರು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಮತ್ತು ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಸಹಕರಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಕುಮಾರಿ ಸುಪ್ರಜಾ, ಕುಮಾರಿ ಕ್ಷಮಾ ಇವರು ಪ್ರಾರ್ಥನೆ, ವಿಷಯ ಮಂಡನೆಯನ್ನು ಕುಮಾರಿ ಅಪೇಕ್ಷ ಕಾರಂತ, ಅಭ್ಯಾಗತರ ಪರಿಚಯವನ್ನು ಕುಮಾರಿ ಖುಷಿ ಪಿ., ಪಂಚಾಂಗ ಪಠಣವನ್ನು ಕುಮಾರಿ ಶರಣವಿ ಹಾಗೂ ಶಂಕನಾದವನ್ನು ಕುಮಾರಿ ಮಾತಂಗಿ ಇವರು ಮಾಡಿದರು. ಕುಮಾರಿ ಪ್ರೇರಣ ಅಭ್ಯಾಗತರ ಪರಿಚಯ ಓದಿದರು. ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರರ ಮಾರ್ಗದರ್ಶನದಲ್ಲಿ ಈ ಸಂಶೋಧನಾತ್ಮಕ ಕಾರ್ಯಕ್ರಮ ನಡೆಯಿತು.