ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವಿಟ್ಲ ಘಟಕದ ವತಿಯಿಂದ 2ನೇ ವರ್ಷದ ಉಚಿತ ಯಕ್ಷಗಾನ ನಾಟ್ಯ ತರಗತಿಯ ಆರಂಭೋತ್ಸವವು ದಿನಾಂಕ 10 ಜುಲೈ 2025ರಂದು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೇಪು ಇಲ್ಲಿ ನಡೆಯಿತು.
ಪಟ್ಲ ಫೌಂಡೇಶನ್ ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿಯವರಾದ ಪೂವಪ್ಪ ಶೆಟ್ಟಿ ಅಳಿಕೆ ಇವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಯಕ್ಷಗಾನದಿಂದ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆ ಆಗುತ್ತದೆ ಉತ್ತಮ ಸಂಸ್ಕಾರ ಹೊಂದಬಹುದು ಎಂದು ತಿಳಿಸುತ್ತಾ, ಪಟ್ಲ ಫೌಂಡೇಶನ್ನಿನ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಸಂಚಾಲಕರಾದ ಅರವಿಂದ್ ರೈ ಮೂರ್ಜೆ ಬೆಟ್ಟು, ಸಹಸಂಚಾಲಕ ಭಾಸ್ಕರ ಶೆಟ್ಟಿ, ಯಕ್ಷಗಾನ ಗುರುಗಳಾದ ಗಣೇಶ್ ಆಚಾರ್ಯ ಕುಂದಲಕೋಡಿ, ಶ್ರೀ ಉಳ್ಳಾಳ್ತಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ಪ್ರಕಾಶ್ ರೈ ಕಲ್ಲಂಗಳ, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಕಾರ್ಯದರ್ಶಿ ಉಮೇಶ್ ಗೌಡ ಕೊರತಿಗದ್ದೆ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವೆಂಕಟ ರಾಘವೇಂದ್ರ ಸ್ವಾಮಿ, ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು. ಯಕ್ಷ ಗುರುಗಳಾದ ಗಣೇಶ್ ಆಚಾರ್ಯ ಕುಂದಲಕೋಡಿ ಇವರಿಗೆ ವೀಳ್ಯವನ್ನು ನೀಡುವುದರೊಂದಿಗೆ ಯಕ್ಷಗಾನ ನಾಟ್ಯ ತರಗತಿಯನ್ನು ಶುಭಾರಂಭ ಮಾಡಲಾಯಿತು. ಈ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿಯವರಾದ ಪೂವಪ್ಪ ಶೆಟ್ಟಿ ಅಳಿಕೆ ಇವರು ತೆಂಕುತಿಟ್ಟು ಯಕ್ಷಗಾನ ಶಿಕ್ಷಣ ತಂತ್ರಜ್ಞಾನ ಆಧಾರಿತ ಪ್ರಾಥಮಿಕ ವಿಭಾಗ ಪಠ್ಯಪುಸ್ತಕ ‘ಯಕ್ಷಧ್ರುವ ಯಕ್ಷ ಶಿಕ್ಷಣ’ ಪಠ್ಯ ಪುಸ್ತಕವನ್ನು ಶಾಲಾ ವಾಚನಾಲಯಕ್ಕೆ ಹಸ್ತಾಂತರಿಸಿದರು.