ಕಾಸರಗೋಡು : ಕೀರ್ತಿಶೇಷ ಭಾಗವತ ನೀಲಾವರ ಲಕ್ಷ್ಮೀನಾರಾಯಣ ರಾಯರ ಜನ್ಮ ಶತಮಾನೋತ್ಸವ 2025 ಸಂಕೀರ್ತನ 12 ತಿಂಗಳ ಸರಣಿ ಕಾರ್ಯಕ್ರಮಗಳ ಮಾಲಿಕೆಯಲ್ಲಿ ಜುಲೈ ತಿಂಗಳ ಕಾರ್ಯಕ್ರಮದಲ್ಲಿ ‘ಯಕ್ಷಗಾನ ತಾಳಮದ್ದಳೆ’ಯು ದಿನಾಂಕ 19 ಜುಲೈ 2025ರಂದು ಸಂಜೆ 2-00 ಗಂಟೆಗೆ ಕಾಸರಗೋಡಿನ ಕೂಡ್ಲು ಶ್ರೀ ವಿಷ್ಣುಮಂಗಳ ದೇವಸ್ಥಾನದಲ್ಲಿ ನಡೆಯಲಿದೆ.
ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ ‘ಜಾಂಬವತಿ ಕಲ್ಯಾಣ’ ಪ್ರಸಂಗದ ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಗೋಪಾಲಕೃಷ್ಣ ನಾವಡ ಮಧೂರು, ಮುರಳಿ ಮಾಧವ ಮಧೂರು ಹಾಗೂ ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್ಟ ಮಧೂರು ಮತ್ತು ರವಿರಾಜ ಪನೆಯಾಲ ಸಹಕರಿಸಲಿದ್ದಾರೆ.