ಪುತ್ತೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಇವರ ಸಂಯೋಜನೆಯಲ್ಲಿ ದಿನಾಂಕ 25 ಜುಲೈ 2025ರಿಂದ 31 ಜುಲೈ 2025ರವರೆಗೆ ಸಾಯಂಕಾಲ 4-00 ಗಂಟೆಯಿಂದ ರಾತ್ರಿ 8-00 ಗಂಟೆವರೆಗೆ ‘ಭೀಷ್ಮ ಭಾರತ’ ಶೀರ್ಷಿಕೆಯಲ್ಲಿ ಸಂಘದ ಮತ್ತು ಅತಿಥಿ ಕಲಾವಿದರಿಂದ ತಾಳಮದ್ದಳೆ ಸಪ್ತಾಹವನ್ನು ಪುತ್ತೂರಿನ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ವಠಾರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 25 ಜುಲೈ 2025ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಇವರ ಅಧ್ಯಕ್ಷತೆಯಲ್ಲಿ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶಿವನಾಥ ರೈ ಮೇಗಿನಗುತ್ತು ಇವರು ಈ ಸಪ್ತಾಹವನ್ನು ಉದ್ಘಾಟನೆ ಮಾಡಲಿದ್ದಾರೆ. ದಿನಾಂಕ 25 ಜುಲೈ 2025ರಂದು ‘ಗಾಂಗೇಯ’, ದಿನಾಂಕ 26 ಜುಲೈ 2025ರಂದು ‘ಭೀಷ್ಮೋತ್ಪತ್ತಿ’, ದಿನಾಂಕ 27 ಜುಲೈ 2025ರಂದು ‘ಸಾಲ್ವ ಶೃಂಗಾರ’, ದಿನಾಂಕ 28 ಜುಲೈ 2025ರಂದು ‘ಅಂಬಾ ಶಪಥ’, ದಿನಾಂಕ 29 ಜುಲೈ 2025ರಂದು ‘ಗಂಗಾ ಸಾರಥ್ಯ’, ದಿನಾಂಕ 30 ಜುಲೈ 2025ರಂದು ‘ಭೀಷ್ಮ ಸೇನಾಧಿಪತ್ಯ’, ದಿನಾಂಕ 31 ಜುಲೈ 2025ರಂದು ‘ಕರ್ಮಬಂಧ / ಭೀಷ್ಮ ಪರ್ವ’ ಎಂಬ ಪ್ರಸಂಗದ ತಾಳಮದ್ದಲೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.