ಕೋಲಾರ : ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಕಮತಗಿ ಹಾಗೂ ಕನ್ನಡ ಭವನ ಕಾಸರಗೋಡು ಜಿಲ್ಲಾ ಘಟಕ ಕೋಲಾರ ಇವುಗಳ ವತಿಯಿಂದ ಕೋಲಾರದ ಪತ್ರಕರ್ತರ ಭವನದಲ್ಲಿ ದಿನಾಂಕ 19 ಜುಲೈ 2025ರಂದು ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ’ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯಿತು.
ಹಿರಿಯ ಸಾಹಿತಿ ಹಾಗೂ ರಂಗ ನಿರ್ದೇಶಕರಾದ ಡಾ. ಇಂಚರ ನಾರಾಯಣ ಸ್ವಾಮಿ ಇವರು ಸರ್ವಾಧ್ಯಕ್ಷತೆ ವಹಿಸಿದ್ದು, ಪುಸ್ತಕ ಮಳಿಗೆ ಉದ್ಘಾಟನೆ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದವು.