ತೀರ್ಥಹಳ್ಳಿ : ಅನ್ನಪೂರ್ಣ ಪ್ರಕಾಶನ ಸಿರಿಗೇರಿ ಇವರ ಆಶ್ರಯದಲ್ಲಿ ಕ.ಸಾ.ಪ. ತೀರ್ಥಹಳ್ಳಿ ತಾಲೂಕು ಘಟಕ ಸಹಯೋಗದಲ್ಲಿ ದಿನಾಂಕ 20 ಜುಲೈ 2025ರಂದು ತೀರ್ಥಹಳ್ಳಿಯ ಬಾಳೇಬೈಲಿನಲ್ಲಿರುವ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಶ್ರೀಮತಿ ವೀಣಾ ಆರ್. ಕಾರಂತ್ ಇವರು ಬರೆದಿರುವ ‘ಕಪಟರು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಮಾರಂಭದಲ್ಲಿ ತೀರ್ಥಹಳ್ಳಿ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಟಿ.ಕೆ. ರಮೇಶ್ ಶೆಟ್ಟಿ, ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಚಂದ್ರಹಾಸ ಹಿರೇಮಳಲಿ, ಲೇಖಕ ಪ್ರಕಾಶಕ ಸಿರಿಗೇರಿ ಯರಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಸಯ್ಯದ್ ಮಲೀಕ್ ಆರಂಭ ಗೀತೆ ಹಾಡಿದರು. ಯರಿಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ನಿರಂಜನ ಕಾರ್ಯಕ್ರಮ ನಿರೂಪಿಸಿ, ಲೇಖಕ ಜಿ.ಕೆ. ಸತೀಶ್ ವಂದಿಸಿದರು.