ಮಂಗಳೂರು : ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆಯು ದಿನಾಂಕ 27 ಜುಲೈ 2025ರಂದು ಸಾಯಂಕಾಲ 5-30 ಗಂಟೆಗೆ ಮಂಗಳೂರಿನ ಡೊಂಗರಕೇರಿ ಕೆನರಾ ಸ್ಕೂಲ್ ಕ್ಯಾಂಪಸ್ ಭುವನೇಂದ್ರ ಸಭಾಂಗಣದಲ್ಲಿ ‘ಅಂಕುರಾ 2025’ ಭರತನಾಟ್ಯ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವನ್ನು ಪುತ್ತೂರಿನ ನಾಟ್ಯರಂಗದ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರು ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಲಿವರು. ಅಂಕುರಾ 2025ರ ಪ್ರಯುಕ್ತ ಉದಯೋನ್ಮುಖ ಕಲಾವಿದರಾದ ತನ್ಮಯಿ ಚಂದ್ರಶೇಖರ್ (ಬೆಂಗಳೂರು), ನೀತಾರಾ ನಾಯರ್ (ದುಬೈ), ಕೃಷ್ಣಭದ್ರಾ ನಂಬೂತಿರಿ (ಮುಂಬೈ) ಇವರು ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಪಡಿಸುವರು. ಅನುಷ್ಕಾ ಶೆಟ್ಟಿ ಹಾಗು ಶರ್ವಾಣಿ ಭಟ್ (ಮಂಗಳೂರು) ಇವರು ಯುಗಳ ಭರತನಾಟ್ಯ ಪ್ರಸ್ತುತಪಡಿಸುವರು.