ಪುತ್ತೂರು: ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವವು ಎಪ್ರಿಲ್ 10ರಿಂದ ಶುರುವಾಗಿ 18ರ ತನಕ ನಡೆಯಿತು. ಜಾತ್ರೆಯ ಎರಡನೇ ದಿನ ದೇವಳದ ಖಂಡನಾಯಕ ಕಟ್ಟೆಯಲ್ಲಿ ದೇವರನ್ನು ಕುಳ್ಳಿರಿಸಿ ಅಷ್ಟಾವಧಾನಸೇವೆ ನಡೆಯಿತು. ಈ ಸಂದರ್ಭ ನೃತ್ಯ ಸೇವೆಯಲ್ಲಿ ಭರತನಾಟ್ಯ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಪುತ್ತೂರಿನ ಸ್ಥಳ ಪುರಾಣವನ್ನು ಮನೋಜ್ಞವಾಗಿ ಅಭಿನಯಿಸುವುದರ ಮೂಲಕ ನೃತ್ಯ ಸೇವೆಯನ್ನು ಗೈದರು. ಇವರಿಗೆ ಹಾಡು ಹಾಗೂ ನಟುವಾಂಗದಲ್ಲಿ ವಿದುಷಿ ಶೋಭಿತಾ ಸತೀಶ್, ಮೃದಂಗ ವಾದನದಲ್ಲಿ ಬಾಲಕೃಷ್ಣ ಹೊಸಮನೆ ಹಾಗೂ ಕೊಳಲಿನಲ್ಲಿ ಕೃಷ್ಣಗೋಪಾಲ ಪುಂಜಾಲಕಟ್ಟೆ ಇವರುಗಳು ಸಹಕರಿಸಿದ್ದರು.