ಕಾಸರಗೋಡು : ತುಳುವ ಮಹಾಸಭೆ ಕಾಸರಗೋಡು ತಾಲೂಕು ಇದರ ವತಿಯಿಂದ ಮಂದಾರ ರಾಮಾಯಣ ಸುಗಿಪು ದುನಿಪು ಕಾರ್ಯಕ್ರಮವನ್ನು ದಿನಾಂಕ 01 ಆಗಸ್ಟ್ 2025ರಂದು ಬೆಳಗ್ಗೆ 9-30 ಗಂಟೆಗೆ ಕಾಸರಗೋಡು ಕಾರ್ಮಾರು ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರಿಂದ ದುನಿಪು ಹಾಗೂ ಪ್ರಶಾಂತ ರೈ ಪುತ್ತೂರು ಮತ್ತು ರಚನಾ ಚಿತ್ಗಲ್ ಇವರಿಂದ ಸುಗಿಪು ಹಾಗೂ ಲವಕುಮಾರ್ ಐಲ ಮದ್ದಲೆಯಲ್ಲಿ ಸಹಕರಿಸಲಿದ್ದಾರೆ. ತುಳುವರ್ಲ್ಡ್ ಫೌಂಡೇಶನ್ ಕಟೀಲ್ ಇವರ ಸಂಯೋಜನೆ ಹಾಗೂ ಮಂಗಳೂರು ಮಂದಾರ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಡಾ. ರಾಜೇಶ್ ಭಟ್ ಮಂದಾರ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.