ಬೆಂಗಳೂರು : ರಂಗಪಯಣ (ರಿ.) ಅರ್ಪಿಸುವ ‘ಗುಲಾಬಿ ಗ್ಯಾಂಗು’ ಭಾಗ -3 ಮತ್ತೆ ಬಂತು ಕ್ರಾಂತಿಕಾರಿ ಮಹಾಕಾವ್ಯ ನಾಟಕ ಪ್ರದರ್ಶನವನ್ನು ದಿನಾಂಕ 30 ಜುಲೈ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಅಸಹಾಯಕರು ಎಂದುಕೊಂಡಿದ್ದ ನನ್ನ ತಾಯಂದಿರು ಅಭೂತಪೂರ್ವ ಗೆಲುವು ದಾಖಲಿಸಿದ ವೀರಗಾಥೆ ಇದಾಗಿದೆ. ಈ ನಾಟಕದ ರಚನೆ ಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನವನ್ನು ರಾಜಗುರು ಹೊಸಕೋಟೆ ಇವರು ಹಾಗೂ ನಿರ್ವಹಣೆ ಹಾಗೂ ವಸ್ತ್ರವಿನ್ಯಾಸ ನಯನ ಜೆ. ಸೂಡ ಇವರು ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 88847 64509 ಸಂಖ್ಯೆಯನ್ನು ಸಂಪರ್ಕಿಸಿರಿ.