Subscribe to Updates

    Get the latest creative news from FooBar about art, design and business.

    What's Hot

    ಚಿತ್ರದುರ್ಗದಲ್ಲಿ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ | 27 ಜುಲೈ

    July 26, 2025

    ಕುರುಡಪದವು ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಔಚಿತ್ಯ ಪೂರ್ಣ ಉದ್ಘಾಟನೆ

    July 26, 2025

    ಯಶಸ್ವಿಯಾಗಿ ನಡೆದ 110ನೇಯ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮ

    July 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮುಸ್ಕಾನ್ ಸೂಫಿಯವರ ಕೃತಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಟ್ಟಿಗೆ ನಾಮ ನಿರ್ದೇಶನ
    Awards

    ಮುಸ್ಕಾನ್ ಸೂಫಿಯವರ ಕೃತಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಟ್ಟಿಗೆ ನಾಮ ನಿರ್ದೇಶನ

    July 26, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿರಾಜಪೇಟೆ : ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೊಡಗಿನ ವಿದ್ಯಾರ್ಥಿನಿಯೊಬ್ಬರು ರಚಿಸಿದ ಕವನ ಸಂಕಲನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ವಿರಾಜಪೇಟೆ ಮೂಲದ ದುದ್ದಿಯಂಡ ಮುಸ್ಕಾನ್ ಸೂಫಿ ಇವರ ಚೊಚ್ಚಲ ಇಂಗ್ಲೀಷ್ ಕೃತಿ ‘ದಿಸ್ ಟೂ ಶೆಲ್ ಪಾಸ್’ ಅನ್ನು ಅಂತಾರಾಷ್ಟ್ರೀಯ ಖ್ಯಾತಿಯ ಬುಕ್ ಲಿಫ್ ಪಬ್ಲಿಕೇಶನ್ ಪ್ರಕಟಿಸಿದ್ದು, ಅಮೆರಿಕ ಮೂಲದ ಪ್ರಸಿದ್ಧ ಕವಿ ಎಮಿಲಿ ಡಿಕ್ಕಿನ್ಸನ್ ಸ್ಮರಣಾರ್ಥವಾಗಿ ನೀಡಲಾಗುವ 21ನೇ ಶತಮಾನದ ಅಂತಾರಾಷ್ಟ್ರೀಯ ಮಟ್ಟದ ‘ಇಂಡಿ ಆಥರ್ಸ್ ಅವಾರ್ಡ್ 2025’ಕ್ಕೆ ನಾಮನಿರ್ದೇಶನಗೊಂಡಿದೆ. ಬುಕ್ ಲಿಫ್ ಪಬ್ಲಿಕೇಶನ್ ಇತ್ತೀಚೆಗೆ ಏರ್ಪಡಿಸಿದ 21 ದಿನಗಳಲ್ಲಿ 21 ಕವನ ರಚಿಸುವ ‘ಸವಾಲುಗಳ ಅಭಿಯಾನ’ದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯ ಮತ್ತು ಮನೋ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಮುಸ್ಕಾನ್ ಸೂಫಿ ಸವಾಲುಗಳ ನಿರ್ದಿಷ್ಟ ಗುರಿ ಸಾಧಿಸಿ ಗಮನ ಸೆಳೆದಿದ್ದಾರೆ.

    ಕಾಲೇಜು ತರಗತಿಗಳ ಬಿಡುವಿನ ಸಮಯದಲ್ಲಿ ಕಾವ್ಯಕೃಷಿಯನ್ನು ಆರಂಭಿಸಿ ಕವನ ರಚನೆಗಳ ಕುರಿತ ಅಭಿಯಾನದ ಗುರಿ ಸಾಧಿಸಿದ ಮುಸ್ಕಾನ್ ಸೂಫಿ, ತಮ್ಮ ಮನದ ಮೂಸೆಯಲ್ಲಿ ಮೂಡಿ ಬಂದ ವಿವಿಧ ಪ್ರಕಾರಗಳ ಭಾವನೆಗಳಿಗೆ ಅಕ್ಷರದ ರೂಪ ನೀಡಿದ್ದಾರೆ. ಬಗೆಬಗೆಯ ಮನುಷ್ಯನ ಏರಿಳಿತಗಳು, ಸಮಾಜದ ಅನೇಕ ಬಗೆಯ ಹೊಯ್ದಾಟಗಳು, ಮನದ ತಳಮಳಗಳು, ಪ್ರಕೃತಿಯ ಸೌಂದರ್ಯ, ಅಂತಿಮವಾಗಿ ಮನುಷ್ಯ ಶರಣಾಗಲೇಬೇಕಾದ ಮರಣ ಸೇರಿದಂತೆ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನಿಟ್ಟುಕೊಂಡು ಮುಸ್ಕಾನ್ ಸೂಫಿ ಕವನ ರಚಿಸಿ ಭಾವಗಳನ್ನು ಕವಿತೆಯಾಗಿಸಿದ್ದಾರೆ.

    ಮುಸ್ಕಾನ್ ಸೂಫಿ ಅವರ ಕಾವ್ಯದಲ್ಲಿ ನೋವು, ಗುಣಪಡಿಸುವಿಕೆ ಮತ್ತು ಸ್ವಯಂ-ಅನ್ವೇಷಣೆಯ ವಿಷಯಗಳನ್ನು ಆಳವಾಗಿ ಬೇರೂರುವಂತೆ ಚಿತ್ರಿಸಲಾಗಿದೆ. ‘ದಿಸ್ ಟೂ ಶಲ್ ಪಾಸ್’ ಸಂಕಲನವು ಜೀವನದ ಕಠಿಣ ಕ್ಷಣಗಳಲ್ಲಿ ಕಂಡುಬರುವ ಶಾಂತ ಶಕ್ತಿಯನ್ನು ಸೆರೆಹಿಡಿದಿದೆ. ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಪದ್ಯಗಳ ಮೂಲಕ ದುರ್ಬಲತೆ ಮತ್ತು ಭರವಸೆಯನ್ನು ಸ್ವೀಕರಿಸಲು ಓದುಗರನ್ನು ಆಹ್ವಾನಿಸುವಂತೆ ಮುಸ್ಕಾನ್ ಕಾವ್ಯ ರಚಿಸಿರುವುದು ವಿಶೇಷವೆನಿಸಿದೆ. ಪ್ರಕೃತಿಯ ಶಾಂತತೆ ಮತ್ತು ದೈನಂದಿನ ಜೀವನದ ಸರಳ ಸೌಂದರ್ಯದಲ್ಲಿ ಶಾಂತಿಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಕಾವ್ಯದ ಮೂಲಕ ನಡೆಸಿರುವ ಮುಸ್ಕಾನ್, ಕಾವ್ಯವು ಆತ್ಮಗಳ ನಡುವಿನ ಸೇತುವೆ ಎಂದು ಕವಿತೆಯಲ್ಲಿ ಪ್ರತಿಪಾದಿಸಿದ್ದಾರೆ. ಮುಸ್ಕಾನ್ ಇವರ ಈ ಕವನ ಸಂಗ್ರಹವು ಬದುಕಿನ ಕತ್ತಲೆಯ ಸಮಯದಲ್ಲಿ ಸಾಂತ್ವನ ಮತ್ತು ಸಂಪರ್ಕವನ್ನು ಸಾಧಿಸುವ ಬಗ್ಗೆಯೂ ಬೆಳಕು ಚೆಲ್ಲಿದೆ.

    ಮುಸ್ಕಾನ್ ಇವರ ಕವನಗಳಲ್ಲಿ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳನ್ನು ಹೆಚ್ಚು ಬಳಸಲಾಗಿದೆ. ಕಾವ್ಯದ ಪ್ರತಿ ಪದಗಳ ಬಳಕೆ ಓದುಗನಿಗೆ ಮುದ ನೀಡುವಂತೆ ರಚಿತವಾಗಿದೆ. ನವೀನವಾದ ಪದಗಳ ಬಳಕೆಗೆ ಹೆಚ್ಚಿನ ನೀಡಲಾಗಿದೆ. ಕವನಗಳ ವಿಷಯವಸ್ತುಗಳನ್ನು ಸೂಕ್ಷ್ಮವಾಗಿ ಪ್ರತಿಪಾದಿಸಲಾಗಿದೆ. ಸಂಕಲನದ ಬಹುತೇಕ ಕವನಗಳು ಆಧುನಿಕತೆಗೆ ಒತ್ತು ನೀಡಲಾಗಿದೆ. ಸರಳ ಹಾಗೂ ಸುಂದರವಾದ ಪದಬಳಕೆಯಿಂದ ಕೂಡಿರುವ ಮುಸ್ಕಾನ್ ಸೂಫಿಯವರ ಈ ಕವನ ಸಂಕಲನ ಮೊದಲ ಹಂತದಲ್ಲೇ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದು ಇಂಗ್ಲೀಷ್ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದೆ.

    award baikady roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಗುಲಾಬಿ ಗ್ಯಾಂಗು’ ಭಾಗ -3 | ಜುಲೈ 30
    Next Article ವಾಣಿ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದಿಂದ ‘ಬರಹ ಕೌಶಲ್ಯ’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಚಿತ್ರದುರ್ಗದಲ್ಲಿ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ | 27 ಜುಲೈ

    July 26, 2025

    ಕುರುಡಪದವು ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಔಚಿತ್ಯ ಪೂರ್ಣ ಉದ್ಘಾಟನೆ

    July 26, 2025

    ಯಶಸ್ವಿಯಾಗಿ ನಡೆದ 110ನೇಯ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮ

    July 26, 2025

    ರಾಮಕೃಷ್ಣ ಕಾಲೇಜಿನಲ್ಲಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನದ ಪ್ರದರ್ಶನ

    July 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.