ಮಣಿಪುರ : ಸರಕಾರಿ ಪ್ರೌಢಶಾಲೆ ಮಣಿಪುರ ಇಲ್ಲಿ ದಿನಾಂಕ 22 ಜುಲೈ 2025ರ ಮಂಗಳವಾರದ೦ದು ಯಕ್ಷಗಾನ ಕಲಾರಂಗ ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇವರ ಸಹಕಾರದೊಂದಿಗೆ ನಡೆಯುವ 2025 -26 ನೇ ಸಾಲಿನ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಶ್ರೀ ಮುರಲಿ ಕಡೆಕಾರ್ ಟ್ರಸ್ಟಿನ ವತಿಯಿಂದ ಯಕ್ಷಗಾನ ತರಬೇತಿ ಮತ್ತು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಬಗ್ಗೆ ತಿಳಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕ್ಷಶಿಕ್ಷಣ ಟ್ರಸ್ಟ್ ಇದರ ವಿಶ್ವಸ್ಥರಾದ ಶ್ರೀ ನಾರಾಯಣ ಎಂ. ಹೆಗಡೆ, ಶುಭ ಹಾರೈಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರದ ಶ್ರೀ ವಿ. ಜಿ. ಶೆಟ್ಟಿ ಹಾಗೂ ಯಕ್ಷಗಾನ ಗುರುಗಳಾದ ಶ್ರೀ ನಿತ್ಯಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು .ಡಯಟ್ ಪ್ರಾಂಶುಪಾಲರಾದ ಡಾ.ಅಶೋಕ ಕಾಮತ್ ಇವರು ಯಕ್ಷಗಾನದಿಂದ ಆಗುವ ಪ್ರಯೋಜನ ಹಾಗೂ ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ರೂಪರೇಖಾ ಹೆಚ್. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿ ಸಹ ಶಿಕ್ಷಕ ನಾಗರಾಜ್ ರವರು ಧನ್ಯವಾದ ಸಲ್ಲಿಸಿದರು.
Subscribe to Updates
Get the latest creative news from FooBar about art, design and business.
Previous Articleಬ್ರಹ್ಮಾವರದಲ್ಲಿ ‘ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನ’ | ಜುಲೈ 27