ಪರ್ಕಳ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕೇಂದ್ರ ಪರ್ಕಳ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಮತ್ತು ಉಡುಪಿ ಘಟಕ ಇವರ ಜಂಟಿ ಆಶ್ರಯದಲ್ಲಿ ‘ಬಡಗುತಿಟ್ಟು – ನಾಟ್ಯ ತರಬೇತಿ’ಯನ್ನು ದಿನಾಂಕ 27 ಜುಲೈ 2025ರಂದು ಬೆಳಗ್ಗೆ 10-00 ಗಂಟೆಗೆ ಪರ್ಕಳ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ನುರಿತ ಯಕ್ಷ ಶಿಕ್ಷಕರಿಂದ ನಾಟ್ಯ, ಮಾತುಗಾರಿಕೆ, ಮುಖವರ್ಣಿಕೆ, ವೇಷಭೂಷಣ, ಸಂಪನ್ಮೂಲ ವ್ಯಕ್ತಿಗಳಿಂದ ಪುರಾಣ ಪರಿಚಯ ಮತ್ತು ರಂಗ ಮಾಹಿತಿಯನ್ನು ಒಳಗೊಂಡ ಸಮಗ್ರ ಅಧ್ಯಯನ ಇದಾಗಿದೆ. ನೋಂದಣಿಗಾಗಿ ಮುರಳೀಧರ ನಕ್ಷತ್ರಿ 94491 06448 ಮತ್ತು ರತನ್ ರಾಜ್ ರೈ 9741497920 ಸಂಖ್ಯೆಯನ್ನು ಸಂಪರ್ಕಿಸಿರಿ.