ಕುರುಡಪದವು : ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಔಚಿತ್ಯ ಪೂರ್ಣ ಉದ್ಘಾಟನೆಯೊಂದಿಗೆ ಸಾಹಿತ್ಯ ಕಮ್ಮಟ ಕಾರ್ಯಕ್ರಮವು ದಿನಾಂಕ 17 ಜುಲೈ 2025ರಂದು ಕುರುಡಪದವಿನ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತವಾಗಿ ಜರಗಿತು.
ಶಾಲಾ ಶಿಕ್ಷಕಿ ಅರ್ಚನಾ ಟೀಚರ್ ಪ್ರಾರ್ಥನೆ ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಧ್ಯಕ್ಷತೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಬಷೀರ್ ಸಾಪ್ಕೋ ಇವರು ಅಧ್ಯಕ್ಷೀಯ ಭಾಷಣದ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಪದ್ಮನಾಭ ಬರ್ಲಾಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರಾದ ಶ್ರೀಪತಿ ಭಟ್ ಪದ್ಯಾಣ ಮತ್ತು ಸಾಹಿತಿ, ಶಿಕ್ಷಕಿಯೂ ಆದ ಶ್ರೀಮತಿ ನಯನ ಗೌರಿ ಸೇರಾಜೆ ಕಾರ್ಯಕ್ರಮವನ್ನು ಜಾನಪದ ಹಾಡಿನೊಂದಿಗೆ ಸಂಯುಕ್ತವಾಗಿ ಉದ್ಘಾಟಿಸಿದರು.
ತದನಂತರ ಸಂಪನ್ಮೂಲ ವ್ಯಕ್ತಿಗಳಿಬ್ಬರನ್ನು ಶಾಲಾ ವತಿಯಿಂದ ಆದರಪೂರ್ವಕವಾಗಿ ಗೌರವಿಸಲಾಯಿತು. ಶಾಲಾ ಹಿರಿಯ ಶಿಕ್ಷಕರಾದ ಗಿರೀಶ್ ಸರ್ ಎಲ್ಲರನ್ನು ಸ್ವಾಗತಿಸಿ, ಶಿಕ್ಷಕರಾದ ಪ್ರಶಾಂತ್ ಕುಮಾರ್ ಅಮ್ಮೇರಿ ವಂದಿಸಿದರು. ಹಿಂದಿ ಶಿಕ್ಷಕರು, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಸತೀಶ್ ಸುವರ್ಣ ಸರ್ ಕಾರ್ಯಕ್ರಮ ನಿರೂಪಿಸಿದರು. ತದನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಪತಿ ಭಟ್ ಸರ್ ಪದ್ಯಾಣ ಮತ್ತು ಶ್ರೀಮತಿ ನಯನ ಗೌರಿಯವರಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕುರಿತಾಗಿ ಕಮ್ಮಟ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳೆಲ್ಲರೂ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗಿಗಳಾದರು.