ಬೆಂಗಳೂರು : ಅಭಿನಯ ತರಂಗ ನಾಟಕ ಶಾಲೆ ಇದರ ವತಿಯಿಂದ ಒಡನಾಡಿ ಬಂಧು ಸಿ.ಜಿ.ಕೆ. -75 ಮಾಸದ ನೆನಪು ಸರಣಿ ನಾಟಕೋತ್ಸವ ಕಾರ್ಯಕ್ರಮವನ್ನು ದಿನಾಂಕ 30 ಜುಲೈ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ ನಯನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
‘ಎರಡು ಕತೆಗಳು .. ಮತ್ತೊಂದು’ ವೀಣಾ ಶಾಂತೇಶ್ವರರ ‘ಕೊನೆಯ ದಾರಿ’ ಹಾಗೂ ವೈದೇಹಿಯವರ ‘ಸಲ್ಮಾ ಮತ್ತು ಸುರಭಿ’ ಮಂಜು ಬಡಿಗೇರ್ ಇವರ ನಿರ್ದೇಶನದಲ್ಲಿ ಹಾಗೂ ಕೊರಡ್ಕಲ್ ಶ್ರೀ ನಿವಾಸರಾವ್ ರವರ ‘ಧನಿಯರ ಸತ್ಯನಾರಾಯಣ’ ಸಚಿನ್ ಭದ್ರಾವತಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಸಿ.ಜಿ.ಕೆ. -75 ಕಿರು ನಾಟಕಗಳ ಉತ್ಸವ ಸಮಿತಿ, ನಾಟಕ ಬೆಂಗ್ಳೂರು ಮತ್ತು ಹವ್ಯಾಸಿ ರಂಗ ತಂಡಗಳು ಈ ಕಾರ್ಯಕ್ರಮದಲ್ಲಿ ಸಹಕರಿಸಲಿದ್ದಾರೆ.