ಮಂಗಳೂರು : ಅ. ಭಾ. ಸಾ. ಪ. ಮಂಗಳೂರು ತಾಲೂಕು ಮತ್ತು ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಸಹಯೋಗದಲ್ಲಿ ಸಂಸ್ಕಾರ- ಸಂಸ್ಕೃತಿ-ಜ್ಞಾನ ಪ್ರಸರಣ ಮಾಲಿಕೆಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 28 ಜುಲೈ 2025ರಂದು ಮಂಗಳೂರಿನ ಸರಕಾರೀ ಪ್ರಾಥಮಿಕ ಶಾಲೆ, ಗಾಂಧಿನಗರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರೋಟರಿ ಕ್ಲಬ್ ಮಂಗಳೂರು ದಕ್ಷಿಣದ ಅಧ್ಯಕ್ಷರಾದ ಶ್ರೀ ಹರೀಶ್ ಅಡ್ಯಾರ್ ಮಾತನಾಡಿ “ಇದೊಂದು ವಿನೂತನವಾದ ಕಾರ್ಯಕ್ರಮ. ಹಿಂದೆ ಒವಿದ್ಯಾರ್ಥಿಗಳು ತಮ್ಮ ಮನೆಯಿಂದಲೇ ಸಂಸ್ಕಾರ ಕಲಿಯುತ್ತಿದ್ದರು. ಇಂದಿನ ವಿದ್ಯಾರ್ಥಿಗಳಿಗೆ ಅದು ದುರ್ಲಭವಾಗಿದೆ. ಅವರಿಗೆ ಅಗತ್ಯವಾಗಿ ನಾವು ಸಂಸ್ಕಾರವನ್ನು ಈ ಮೂಲಕವಾಗಿ ಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ಅ. ಭಾ. ಸಾ. ಪ. ಕೈಗೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ ಮಾತ್ರವಲ್ಲ ನಮ್ಮನ್ನೂ ಅದರಲ್ಲಿ ಸೇರಿಸಿಕೊಂಡಿರುವುದು ನಮ್ಮ ಸೌಭಾಗ್ಯ” ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಅ. ಭಾ. ಸಾ. ಪ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಹರೀಶ್ ಪಿ. ಬಿ. ಯವರು ವಿದ್ಯಾರ್ಥಿಗಳಿಗೆ ಮಾಧ್ಯಮ ಮತ್ತು ಅಂತರ್ಜಾಲದ ಬಗ್ಗೆ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಮಂಗಳೂರು ದಕ್ಷಿಣದಿಂದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಅ. ಭಾ. ಸಾ. ಪ. ಮಂಗಳೂರು ವತಿಯಿಂದ 100 ನೋಟ್ ಬುಕ್ ಗಳನ್ನು ವಿತರಿಸಲಾಯಿತು.
ರೋಟರಿ ಕ್ಲಬ್ ದಕ್ಷಿಣದ ಸಮಾಜ ಸೇವಾ ಪ್ರಮುಖರಾದ ನಿಖಿಲ್ ಸುವರ್ಣ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶರ್ಮಿಳಾ ಡಿ’ ಸೋಜಾರವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ದಕ್ಷಿಣದ ಪದಾಧಿಕಾರಿಗಳಾದ ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಶ್ರೀ ಗೋಪಾಲಕೃಷ್ಣ ಶೆಟ್ಟಿ, ಶ್ರೀ ನಿತಿನ್ ಅತ್ತಾವರ, ಅ. ಭಾ. ಸಾ. ಪ. ಮಂಗಳೂರು ತಾಲೂಕಿನ ಉಪಾಧ್ಯಕ್ಷರಾದ ಶ್ರೀ ನರಸಿಂಹ ಶೆಟ್ಟಿ ತುಪ್ಪೇಕಲ್ಲು, ಶ್ರೀಮತಿ ಚಂದ್ರಪ್ರಭಾ ದಿವಾಕರ್, ಉಪಕಾರ್ಯದರ್ಶಿ ಶ್ರೀಮತಿ ರವಿಕಲಾ ಸುಂದರ್ ಉಪಸ್ಥಿತರಿದ್ದರು.
ಅ. ಭಾ. ಸಾ. ಪ. ಮಂಗಳೂರು ಸಮಿತಿಯ ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿ, ಪದಾಧಿಕಾರಿ ಶ್ರೀಮತಿ ಮಮತಾ ಎಸ್. ರಾವ್ ನಿರೂಪಿಸಿ, ಕೋಶಾಧಿಕಾರಿ ಶ್ರೀಮತಿ ಬೀನಾ ವಿದ್ಯಾಸಾಗರ್ ವಂದಿಸಿದರು.