ಬೆಂಗಳೂರು : ವಯೋಲಿನ್ ಅಕಾಡೆಮಿ ಮತ್ತು ಸಪ್ತಕ್ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ಸ್ವರ ಮಲ್ಹಾರ್’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಶ್ರೀ ನರಸಿಂಹರಾಜ ಕಾಲೋನಿಯಲ್ಲಿರುವ ಪಠಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ತೇಜಸ್ ಉಪಾಧ್ಯೆ ಇವರಿಂದ ವಯೋಲಿನ್ ಸೋಲೋ, ರಾಹುಲ್ ಶರ್ಮಾ ಇವರ ಸಂತೂರ್ ಮತ್ತು ಓಜಸ್ ಅಧಿಯಾ ಇವರ ತಬಲಾ ವಾದನ ಹಾಗೂ ಪಂಡಿತ್ ಆನಂದ್ ಭಾಟೆ ಇವರ ಹಾಡುಗಾರಿಕೆಗೆ ಭರತ್ ಕಾಮತ್ ತಬಲಾದಲ್ಲಿ ಮತ್ತು ಸುಯೋಗ ಕುಂಡಲ್ಕರ್ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 70194 34992 ಮತ್ತು 95355 11888 ಸಂಖ್ಯೆಯನ್ನು ಸಂಪರ್ಕಿಸಿರಿ.