ನಂದಳಿಕೆ : ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಹಮ್ಮಿಕೊಂಡ ತಾಳಮದ್ದಳೆ ಜ್ಞಾನಯಜ್ಞ ಶತಕೋತ್ತರ ಪ್ರಸ್ತುತಿ ಹಾಗೂ ಬೆಳ್ಮಣ್ ಜೇಸಿ ಸಂಸ್ಥೆ ಆಗಸ್ಟ್ ತಿಂಗಳ ಸಮಾರಂಭ ನಿಮಿತ್ತ ದಿನಾಂಕ 02 ಆಗಸ್ಟ್ 2025ರಂದು ಸಂಜೆ 6-00 ಗಂಟೆಗೆ ನಂದಳಿಕೆ ಬೋರ್ಡ್ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಕವಿ ಸಂಕಯ ಭಾಗವತ ವಿರಚಿತ ‘ಸೊರ್ಕುದ ದಾರುಕೆ’ ಕೃಷ್ಣಾರ್ಜುನ ಕಾಳಗದ ಆಯ್ದ ಭಾಗದ ಹಿಮ್ಮೇಳದಲ್ಲಿ ಗಣೇಶ ಮಯ್ಯ ವರ್ಕಾಡಿ, ಕುಮಾರ ಮಯ್ಯ ವರ್ಕಾಡಿ ಮತ್ತು ಭವಿಷ್ಯ ಶೆಟ್ಟಿ ಪಂಜಿನಡಕ ಹಾಗೂ ಮುಮ್ಮೇಳದಲ್ಲಿ ಅರ್ಜುನ : ವಿಶ್ವನಾಥ ಸಾಂತೂರು ಮತ್ತು ದಾರುಕ : ಸುಬ್ರಹ್ಮಣ್ಯ ಪಂಜಿನಡಕ ಸಹಕರಿಸಲಿದ್ದಾರೆ.