ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಪ್ರಸಕ್ತ ಸಾಲಿನಿಂದ ಕಿಶೋರ ಕನಕ ಕಾವ್ಯ ಸ್ಪರ್ಧೆ ಆಯೋಜಿಸುತ್ತಿದೆ.
ಕನಕದಾಸರ ಕಾವ್ಯಗಳನ್ನು ಮಾತ್ರ ಗಮಕ ವಾಚನಕ್ಕೆ ಪರಿಗಣಿಸಲಾಗುತ್ತದೆ. 10ರಿಂದ 15 ವರ್ಷದೊಳಗಿನವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಥಮ ಸ್ಥಾನ ಪಡೆದವರಿಗೆ ರೂಪಾಯಿ 20 ಸಾವಿರ, ದ್ವೀತಿಯ ಸ್ಥಾನ ಪಡೆದವರಿಗೆ ರೂಪಾಯಿ 15 ಸಾವಿರ, ತೃತೀಯ ಸ್ಥಾನ ಪಡೆದವರಿಗೆ ರೂಪಾಯಿ 10 ಸಾವಿರ ಹಾಗೂ ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ತಲಾ ರೂಪಾಯಿ 5 ಸಾವಿರ ನೀಡಲಾಗುತ್ತದೆ.
ಕಿಶೋರ ಕನಕ ಕಾವ್ಯ ಗಮಕ ಸ್ಪರ್ಧೆಯ ನಿಯಮಗಳು :
1. ಈ ಸ್ಪರ್ಧೆಯು ಕಿಶೋರ ಪ್ರತಿಭೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಕಿಶೋರ ಪ್ರತಿಭೆ ಅಂದರೆ 10 ರಿಂದ 15 ವರ್ಷದ ವಯೋಮಾನದವರು.
2. ಕನಕದಾಸರ ಕಾವ್ಯಗಳನ್ನು ಮಾತ್ರ ಗಮಕ ವಾಚನಕ್ಕೆ ಆಯ್ಕೆಮಾಡಿಕೊಳ್ಳುವುದು.
3. ಸ್ಪರ್ಧೆಯಲ್ಲಿ ಭಾಗವಹಿಸುವವರ ವಯಸ್ಸು 15 ವರ್ಷ ಮೀರಿರಬಾರದು. ಜನ್ಮ ದಿನಾಂಕಕ್ಕೆ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸಬೇಕು.
4. ಗಾಯನಕ್ಕೆ ಶೃತಿ ಬಾಕ್ಸ್‌ನ್ನು ಮಾತ್ರ ಬಳಸಬೇಕು. ಮೊಬೈಲ್ ಇತ್ಯಾದಿ ಆಧುನಿಕ ಉಪಕರಣಗಳನ್ನು ಬಳಸುವಂತಿಲ್ಲ.
5. ಸ್ಪರ್ಧೆಗೆ ಆಗಮಿಸುವ ಸ್ಪರ್ಧಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬರಬೇಕು.
6. ಸ್ಪರ್ಧೆಯನ್ನು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಮಲ್ಲತ್ತಹಳ್ಳಿ, ಕಲಾಗ್ರಾಮ, ಬೆಂಗಳೂರು ಇಲ್ಲಿ ನಡೆಸಲಾಗುತ್ತದೆ. ಸ್ಪರ್ಧಿಗಳು ತಮಗೆ ನಿಗದಿ ಮಾಡಿದ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಬರಬೇಕು ತಡವಾಗಿ ಬಂದವರನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
7. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಗೂ ಗಮಕ ಗಾಯನಕ್ಕೆ ಗರಿಷ್ಠ ಹತ್ತು ನಿಮಿಷ ಕಾಲಾವಕಾಶವಿರುತ್ತದೆ.
8. ಬಹುಮಾನ ವಿಜೇತರಿಗೆ ಪ್ರತ್ಯೇಕ ಸಮಾರಂಭದಲ್ಲಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಸಮಾರಂಭದಲ್ಲಿ ಭಾಗವಹಿಸುವ ಬಹುಮಾನ ವಿಜೇತರಿಗೆ ಪ್ರಯಾಣ ಭತ್ಯೆಯನ್ನು ಮಾತ್ರ ನೀಡಲಾಗುವುದು. ಬಹುಮಾನ ವಿತರಣಾ ದಿನಾಂಕವನ್ನು ಮುಂಚಿತವಾಗಿ ವಿಜೇತರಿಗೆ ತಿಳಿಸಲಾಗುವುದು.
9. ಸ್ಪರ್ಧೆಗೆ ಅಗತ್ಯ ಸಂಖ್ಯೆಯ ಸ್ಪರ್ಧಿಗಳು ಭಾಗವಹಿಸದಿದ್ದರೆ ಅಥವಾ ಅನಿರೀಕ್ಷಿತ ಅಡಚಣೆಯಿಂದ ಅನಾನುಕೂಲವಾದರೆ ಸ್ಪರ್ಧೆಯನ್ನು ರದ್ದು ಮಾಡುವ ಅಥವಾ ಮುಂದೂಡುವ ಸ್ವಾತಂತ್ರ್ಯ ಅಧ್ಯಯನ ಕೇಂದ್ರಕ್ಕೆ ಇರುತ್ತದೆ.
10. ಕಿಶೋರ ಪ್ರತಿಭೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಅಧ್ಯಯನ ಕೇಂದ್ರದ https://kanakadasaresearchcenter.karnataka.gov.in/ ಮಾಹಿತಿಯನ್ನೊಳಗೊಂಡ ಅರ್ಜಿಗಳನ್ನ ಭರ್ತಿಮಾಡಿ ದಾಖಲೆಗಾಗಿ ಜನನ ಪ್ರಮಾಣ ಪತ್ರ(Birth Certificate) ಮತ್ತು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056 ಈ ವಿಳಾಸಕ್ಕೆ ಅಥವಾ ಇ-ಮೇಲ್ kanaka research [email protected] ದ ಮೂಲಕ 2025ರ ಸೆಪ್ಟೆಂಬರ್ 16 ರಂದು ಸಂಜೆ 5.00 ಗಂಟೆಯೊಳಗೆ ತಲುಪುವಂತೆ ಕಳುಹಿಸಿಕೊಡಬೇಕು. ತಡವಾಗಿ ಬಂದ ಮತ್ತು ಅಪೂರ್ಣ ಅರ್ಜಿಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ ಮತ್ತು ಇದಕ್ಕೆ ಸಂಬಂಧಿಸಿ ಪತ್ರ ವ್ಯವಹಾರ ಇರುವುದಿಲ್ಲ, ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.