ಹಂಪಿ : ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಸಹಯೋಗದಲ್ಲಿ ‘ದಕ್ಷಿಣ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ವಿಮರ್ಶೆ’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಯನ್ನು ದಿನಾಂಕ 05 ಆಗಸ್ಟ್ 2025, ಮಂಗಳವಾರ ಬೆಳಗ್ಗೆ 10-00 ಗಂಟೆಗೆ ಹಂಪಿ ವಿದ್ಯಾರಣ್ಯ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಿ.ವಿ. ಪರಮಶಿವಮೂರ್ತಿ ಇವರು ಉದ್ಘಾಟನೆ ಮಾಡಲಿದ್ದು, ಪ್ರಸಿದ್ಧ ಲೇಖಕರು ವಿಮರ್ಶಕರಾದ ಎಸ್. ಸಿರಾಜ್ ಅಹಮದ್ ಇವರು ಆಶಯ ನುಡಿಗಳನ್ನಾಡಲಿದ್ದಾರೆ. ಬೆಳಗ್ಗೆ 11-00 ಗಂಟೆಗೆ ಮೊದಲನೆಯ ಗೋಷ್ಠಿಯಲ್ಲಿ ‘ತಮಿಳು ವಿಮರ್ಶೆ – ಒಂದು ಅವಲೋಕನ’ ಎಂಬ ವಿಷಯದ ಬಗ್ಗೆ ಆರ್. ಮೊರಿಸ್ ಜಾಯ್ ಮತ್ತು ಎನ್. ಗೋವಿಂದರಾಜನ್, ಮಧ್ಯಾಹ್ನ 12-00 ಗಂಟೆಗೆ ಎರಡನೆಯ ಗೋಷ್ಠಿಯಲ್ಲಿ ‘ತೆಲುಗು ವಿಮರ್ಶೆ – ಒಂದು ಅವಲೋಕನ’ ಎಂಬ ವಿಷಯದ ಬಗ್ಗೆ ಸಿ. ಮೃಣಾಳಿನಿ ಮತ್ತು ಕಾಸುಲ ಪ್ರತಾಪ ರೆಡ್ಡಿ, ಮಧ್ಯಾಹ್ನ 02-00 ಗಂಟೆಗೆ ಮೂರನೆಯ ಗೋಷ್ಠಿಯಲ್ಲಿ ‘ಕನ್ನಡ ವಿಮರ್ಶೆ – ಒಂದು ಅವಲೋಕನ’ ಎಂಬ ವಿಷಯದ ಬಗ್ಗೆ ಕೆ. ರವೀಂದ್ರನಾಥ ಮತ್ತು ಸುಭಾಷ್ ರಾಜಮಾನೆ, ಮಧ್ಯಾಹ್ನ 03-00 ಗಂಟೆಗೆ ನಾಲ್ಕನೆಯ ಗೋಷ್ಠಿಯಲ್ಲಿ ‘ಮಲೆಯಾಳಂ ವಿಮರ್ಶೆ – ಒಂದು ಅವಲೋಕನ’ ಎಂಬ ವಿಷಯದ ಬಗ್ಗೆ ಜೆ. ಪ್ರಮೀಳಾ ದೇವಿ ಮತ್ತು ಅಜಿತನ್ ಮೆನೊತ್ ಇವರುಗಳು ಪ್ರಬಂಧ ಮಂಡನೆ ಮಾಡಲಿದ್ದಾರೆ. ಸಂಜೆ 4-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ವಿಜಯ್ ಪೂಣಚ್ಚ ತಂಬಂಡ ಇವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತ್ಯ ಅಕಾಡೆಮಿ ಸದಸ್ಯರಾದ ಮನು ಬಳಿಗಾರ್ ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ.