ಮಂಗಳೂರು : ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ಪೂರಕವಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತನ್ನ ಫಲಪ್ರದ ಆಸ್ತಿತ್ವದ 25ನೇ ವರ್ಷದ ಬೆಳ್ಳಿ ಹಬ್ಬ ‘ರಜತ ರಂಗು’ ಸಂಭ್ರಮದಲ್ಲಿರುವ ಮಂಗಳೂರಿನ ‘ಕಲ್ಲಚ್ಚು ಪ್ರಕಾಶನ’ ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠಿತ ‘ಕಲ್ಲಚ್ಚು ಪ್ರಶಸ್ತಿ’ಯ 16ನೇ ಆವೃತ್ತಿಗೆ ಕರ್ನಾಟಕದ ಪಂಚ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ದಿನಾಂಕ 31 ಆಗಸ್ಟ್ 2025ರ ಭಾನುವಾರ ಸಂಜೆ 4-00 ಗಂಟೆಗೆ ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿ ಇರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ವಿವಿಧ ಅತಿಥಿ ಗಣ್ಯರ ಉಪಸ್ಥಿತಿಯ ಅದ್ದೂರಿ ಸಮಾರಂಭದಲ್ಲಿ ಇದನ್ನು ಪ್ರದಾನ ಮಾಡಲಾಗುವುದೆಂದು ಸಂಸ್ಥೆಯ ಮುಖ್ಯಸ್ಥ ಸಾಹಿತಿ, ಮಹೇಶ ಆರ್. ನಾಯಕ್ ತಿಳಿಸಿದ್ದಾರೆ.
ಈ ಬಾರಿಯ ಪ್ರಶಸ್ತಿ ಪುರಸ್ಕೃತರಾಗಿ ಜಬೀವುಲ್ಲಾ ಎಂ. ಅಸದ್ : ಕವಿ – ಕಲಾವಿದ ಮೊಳಕಾಲ್ಮೂರು, ‘ಗೋಕಾವಿ ಗೆಳೆಯರ ಬಳಗ’ ಬೆಳಗಾವಿ (ಪ್ರಾ. ಜಯಾನಂದ ಮಾದರ – ಸಂಸ್ಥಾಪಕ ಅಧ್ಯಕ್ಷ), ರೆಮೊನಾ ಎವೆಟ್ ಪೆರೇರಾ ಭರತನಾಟ್ಯ ಕಲಾವಿದೆ ಮಂಗಳೂರು, ಡಾ. ಎಸ್.ಎಮ್. ಶಿವಪ್ರಕಾಶ್ – ಬಹುಮುಖ ಪ್ರತಿಭಾವಂತರು ಮಂಗಳೂರು ಮತ್ತು ಡಾ. ಪ್ರಕಾಶ್ ಕೆ. ನಾಡಿಗ್ ಸಾಹಿತಿ ತುಮಕೂರು ಇವರುಗಳು ಆಯ್ಕೆಯಾಗಿರುತ್ತಾರೆ.