ಮಧೂರು : ಉಳಿಯ ದನ್ವಂತರಿ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 03 ಆಗಸ್ಟ್ 2025 ಭಾನುವಾರದಂದು ‘ಗುರುದಕ್ಷಿಣೆ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರು ಶ್ರೀ ವಾಸುದೇವ ಕಲ್ಲೂರಾಯ ಮಧೂರು ಮತ್ತು ಶ್ರೀ ರವಿಶಂಕರ ಮಧೂರು ಹಾಗೂ ಮದ್ದಳೆಯಲ್ಲಿ ಶ್ರೀ ಮುರಳಿಮಾಧವ ಮಧೂರು ಮತ್ತು ಶ್ರೀ ಗೋಪಾಲ ಕೃಷ್ಣ ನಾವಡ ಮಧೂರು ಇವರುಗಳು ಸಹಕರಿಸಿದರು. ಮುಮ್ಮೇಳದಲ್ಲಿ ದ್ರೋಣ 1: ಶ್ರೀ ವಿಷ್ಣು ಭಟ್ ಕಕ್ಕೆಪ್ಪಾಡಿ ಮಧೂರು ಮತ್ತು ದ್ರೋಣ 2: ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಏಕಲವ್ಯ: ನರಸಿಂಹ ಬಲ್ಲಾಳ್, ಧ್ರುಪದ ರಾಜ 1: ಶ್ರೀ ಸುದರಕೃಷ್ಣ ಗಟ್ಟಿ ಕಾಸರಗೋಡು ಮತ್ತು ಧ್ರುಪದ ರಾಜ 2: ಶ್ರೀ ಮಯೂರ ಆಸ್ರ ಉಳಿಯ, ಅರ್ಜುನ 1: ಗೋಪಾಲ ಅಡಿಗ ಕೂಡ್ಲು ಮತ್ತು ಅರ್ಜುನ 2 ಶ್ರೀಮತಿ ಸರಸ್ವತಿ ಟೀಚರ್ ಕೂಡ್ಲು, ಕೌಸವಿ : ಶ್ರೀಮತಿ ಧನ್ಯ ಮುರಳಿ ಕೃಷ್ಣ ಆಸ್ರ ಉಳಿಯ ಇವರುಗಳು ಭಾಗವಹಿಸಿದ್ದರು.