ರಾಮನಗರ : ಚುಟುಕು ಸಾಹಿತ್ಯ ಪರಿಷತ್ತು ರಾಮನಗರ ಹಾಗೂ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿಯ ಸಹಯೋಗದಲ್ಲಿ ದಿನಾಂಕ 30 ಆಗಸ್ಟ್ 2025ರ ಶನಿವಾರದಂದು ರಾಮನಗರದ ನ್ಯೂ ಎಕ್ಸ್ ಪರ್ಟ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ‘ಚುಟುಕು ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ಸಾಹಿತಿಗಳು, ಕಲಾವಿದರು ಹಾಗೂ ಪೊಲೀಸ್ ಅಧಿಕಾರಿಗಳಾದ ಡಾ. ಶೈಲೇಶ್ ಕಾಕೋಳು ಇವರನ್ನು ಎರಡು ಸಂಸ್ಥೆ ಹಾಗೂ ಹಿರಿಯರು ಆಶಯದಂತೆ ಅವರ ಗಣನೀಯ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಇವರಿಗೆ ಎರಡು ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ಅವರ ರಾಮನಗರದ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ವಕೀಲರಾದ ಶ್ರೀ ಅಂಬರೀಷ್, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಎಮ್. ರಮೇಶ ಕಮತಗಿ, ನಿವೃತ್ತ ಉಪನ್ಯಾಸಕರಾದ ಪೂರ್ಣಚಂದ್ರ, ಪ್ರೊ. ರಮೇಶ ಹೊಸದೊಡ್ಡಿ, ಚುಟುಕು ಕವಿ ಜಿ. ರಘುನಾಥ್, ವಕೀಲರಾದ ಹರೀಶ್, ಶ್ರೀಮತಿ ಅರ್ಪಿತಾ ಇತರರು ಉಪಸ್ಥಿತರಿದ್ದರು.